ಅರಸೀಕೆರೆ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಸಂತೋಷ್‌ಕುಮಾರ್, ಯೋಗೀಶಾಚಾರ್, ತಿಮ್ಮಾಚಾರ್, ಗಂಗಣ್ಣ ಇದ್ದರು.
- ಶಾಸಕ ಕೆ.ಎಂ.ಶಿವಲಿಂಗೇಗೌಡ
- ವಿಶ್ವಕರ್ಮ ಸಮುದಾಯ ಭವನ
ಅರಸೀಕೆರೆ: ಭಾರತೀಯ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಲೂರು, ಹಳೇಬೀಡು ಸೇರಿದಂತೆ ನಾಡಿನ ಹಲವೆಡೆ ನಿರ್ಮಿಸಿರುವ ಭವ್ಯ ದೇಗುಲಗಳು ವಿದೇಶಿಯರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಶಿಲ್ಪಕಲಾ ವೈಭವ ಪಸರಿಸಿದ ಕೀರ್ತಿ ವಿಶ್ವ ಕರ್ಮ ಸಮುದಾಯಕ್ಕೆ ಸಲ್ಲಲಿದೆ. ಜಕಣಾಚಾರಿ ಶಿಲ್ಪಕಲೆಯ ಸಾಧನೆಯಿಂದ ಅಮರಶಿಲ್ಪಿಯಾದರು. ವಿಶ್ವ ಕರ್ಮ ಸಮಾಜದ ಕಲಾ ಪ್ರವೃತ್ತಿಯೂ ಶ್ರೇಷ್ಠವಾಗಿದ್ದು, ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಲೆ ವಾಸ್ತುಶಿಲ್ಪ ವೈಭವ ಮುಂದಿನ ಪೀಳಿಗೆಗೂ ತಿಳಿಸುವಂತಾಗಬೇಕು ಎಂದು ಹೇಳಿದರು.
ತಹಸೀಲ್ದಾರ್‌ಎಂ.ಜಿ.ಸಂತೋಷ್‌ಕುಮಾರ್ ಮಾತನಾಡಿ, ವಿಶ್ವಕರ್ಮ ಸಮಾಜದ ಜಕಣಾ-ಚಾರಿಯ ಕೊಡುಗೆಯನ್ನು ಶಾಲಾ ಮಕ್ಕಳಿಗೆ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಯೋಗೀಶಾಚಾರ್, ಗೌರವಾಧ್ಯಕ್ಷ ತಿಮ್ಮಾಚಾರ್, ಕ್ಷೇತ್ರಶಿಕ್ಷಣಾಧಿಕಾರಿ ಮೋಹನ್‌ಕುಮಾರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ತಾಪಂ ಇಒ ಗಂಗಣ್ಣ, ಪೌರಾಯುಕ್ತ ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ, ದೈಹಿಕ ಶಿಕ್ಷಣ ಪರೀವಿಕ್ಷಕ ವಸಂತಕುಮಾರ್, ಗಂಗಾಮತಸ್ಥ ಸಮಾಜದ ಮುಖಂಡ ಕೇಶವಮೂರ್ತಿ ಸೇರಿದಂತೆ ವಿಶ್ವಕರ್ಮ ಸಂಘದ ಪದಾಧಿಕಾರಿಗಳು ಹಾಜರಿದ್ದರು.