ಹೊಳೆನರಸೀಪುರದ ತಾಲೂಕು ಕಚೇರಿಯಲ್ಲಿ ಆಯೊಜಿಸಿದ್ದ ಕಾರ್ಯಕ್ರಮದಲ್ಲಿ ಜಕಣಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
- ತಾಲೂಕು ಕಚೇರಿ
- ರಾಷ್ಟಪ್ರಶಸ್ತಿ ಪುರಸ್ಕೃತ, ಕಲಾವಿದ ಶಿವಕುಮಾರಾಚಾರ್
ಹೊಳೆನರಸೀಪುರ: ಕಲ್ಲನ್ನು ಸುಂದರ ಪ್ರತಿಮೆಯಾಗಿಸುವ ಮೂಲಕ ವಿಶ್ವಕ್ಕೆ ಪ್ರಸಿದ್ಧ ಶಿಲ್ಪಕಲೆಯನ್ನು ಪರಿಚಯಿಸಿದ ಜಕಣಾಚಾರಿ ಅಮರ ಶಿಲ್ಪಿಯಾದರು ಎಂದು ರಾಷ್ಟಪ್ರಶಸ್ತಿ ಪುರಸ್ಕೃತ, ಕಲಾವಿದ ಶಿವಕುಮಾರಾಚಾರ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರ್ಯರ ಜಯಂತಿಯಲ್ಲಿ ಮಾತನಾಡಿದ ಅವರು, ತಮ್ಮ ಜೀವಿತಾವಧಿಯ ಬಹುಪಾಲನ್ನು ಶಿಲ್ಪಕಲೆಗಾಗಿ ಮುಡುಪಾಗಿಟ್ಟರೂ ಒಂದೆಡೆಯೂ ಜಕಣಾಚಾರಿ ಹೆಸರಿಲ್ಲ. ಸಮಾಜಕ್ಕೆ ನೀಡಿದ ಕೊಡಗೆಯಿಂದಲೇ ಅವರ ಹೆಸರು ಅಮರವಾಗಿ ಉಳಿದಿದೆ ಎಂದರು.
ಸೋಮನಾಥ ದೇವಾಲಯ, ಹಳೇಬೀಡು, ಬೇಲೂರು ಹಾಗೂ ಅವರ ಹುಟ್ಟೂರು ಕೈದಾಳ ದೇಗುಲ ಇಂದಿಗೂ ಅವರ ಖ್ಯಾತಿಯನ್ನು ಸಾರಿದೆ. ಕುಸುರಿ ಕೆತ್ತನೆಗಳು ಅಮರತ್ವವನ್ನು ಪ್ರತಿಧ್ವನಿಸಿವೆ ಎಂದರು.
ಪಟ್ಟಣದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಸಮುದಾಯದವರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ತಹಸೀಲ್ದಾರ್ ರೇಣುಕುಮಾರ್, ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಾಚಾರ್, ಉಪಾಧ್ಯಕ್ಷ ರೇವಣ್ಣಾಚಾರ್, ಅರ್ಚಕ ಮಲ್ಲೇಶಾಚಾರ್, ಮುಖಂಡ ಕಲ್ಲೇಶಾಚಾರ್ ಹಾಗೂ ಮಹೇಶಾಚಾರ್ ಉಪಸ್ಥಿತರಿದ್ದರು.