ಆಲೂರು ತಾಲೂಕು ಚಿನ್ನಹಳ್ಳಿ-ಮಗ್ಗೆ ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು. ಪಿಡಿಒ ಧನಂಜಯ್, ಅಬ್ಬನ ಕೃಷ್ಣಮೂರ್ತಿ, ಚಂದ್ರಶೆಟ್ಟಿ ಸೇರಿದಂತೆ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು. 
ಹಾಸನ

ಮೂಲಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ

ಪ್ರಮುಖ ಮುಖ್ಯಾಂಶಗಳು

  • provide infrastructure
ಆಲೂರು: ಜನಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಾಳ್ಯ ಹೋಬಳಿ ಅಬ್ಬನ ಗ್ರಾಮದಿಂದ ಸಿಂಗೋಡನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲಿಸುವ ಸುಮಾರು 50 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ ಬಂದು 80 ವರ್ಷಗಳಾಗುತ್ತ ಬಂದರೂ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಇನ್ನೂ ಅನೇಕ ಕುಗ್ರಾಮಗಳಲ್ಲಿ ಬಂಡಿ ದಾರಿಯಲ್ಲಿ ಸಾಗಬೇಕಾಗಿದೆ. ಅಂತಹ ಸ್ಥಳಗಳನ್ನು ಹುಡುಕಿ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇನೆ. ಜನಪ್ರತಿನಿಧಿಗಳ ಜತೆ ಸ್ಥಳೀಯರು, ಮುಖಂಡರು ಕೈ ಜೋಡಿಸಿದರೆ ಗ್ರಾಮಗಳಿಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಚಿನ್ನಳ್ಳಿ ಗ್ರಾಮದಲ್ಲಿ ನೂತನವಾಗಿ 20 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮತ್ತು 1.10 ಕೋಟಿ ರೂ. ವೆಚ್ಚದಲ್ಲಿ ಚಿನ್ನಹಳ್ಳಿ-ಮಗ್ಗೆ ಗ್ರಾಮ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು.
ಪಿಡಿಒ ಧನಂಜಯ್, ಅಲೂರು-ಕಟ್ಟಾಯ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಅಬ್ಬನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೆಟ್ಟಿ, ನಿರ್ದೇಶಕ ಸಂಪತ್ತು, ಬಿಜೆಪಿ ಮುಖಂಡರಾದ ವಿರೂಪಾಕ್ಷ, ಯುವಮೋರ್ಚಾ ಅಧ್ಯಕ್ಷ ಗಣೇಶ್ ಸ್ನೇಹಜೀವಿ, ರವೀಂದ್ರ, ಚೇತನ್, ಗ್ರಾಮಸ್ಥರಾದ ಚಂದ್ರಶೆಟ್ಟಿ ಶ್ರೀನಿವಾಸ್ ಪ್ರೇಮಯ್ಯ, ದಿನೇಶ್ ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.