ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರನ್ನು ದೇವಸ್ಥಾನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ರಸೀಕೆರೆ ಜೈನ ಸಮಾಜದ ಅಧ್ಯಕ್ಷ ಪಾರಸ್ ಮೇಲ್ ಮೆಹ್ತಾ, ಚಂಗನ್ ಲಾಲ್ ಸೊಲಂಕಿ, ಅಮರ್ ಚಂದ್ ಜೈನ್, ಚೇತನ್ ಜೈನ್, ಉಮೇಶ್ ಕಟಾರಿಯ ಇತರರು ಹಾಜರಿದ್ದರು
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾಜೂರು ಗ್ರಾಮದ ಸಮೀಪ ವಿಶ್ವಪ್ರಸಿದ್ಧ ದೇವಾಲಯವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಶಾಂತಿ ಗುರುಗಳ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಪದಾಧಿಕಾರಿಗಳು ಗುರುವಾರ ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಹ್ವಾನಿಸಿದರು.
ಫೆಬ್ರವರಿ ತಿಂಗಳಲ್ಲಿ ನಡೆಯುವ ಭೈರವಧಾಮದ ಸಮೀಪ ನಿರ್ಮಾಣಗೊಂಡಿರುವ ಯೋಗಿರಾಜ್ ಶ್ರೀ ಶಾಂತಿ ಗುರುಗಳ ಮಂದಿರದ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಬೇಕೆಂದು ಕೇಳಿಕೊಂಡಾಗ ಪೂಜ್ಯರು ಆಶೀರ್ವಾದ ಪೂರಕವಾಗಿ ಒಪ್ಪಿಕೊಂಡು ಈ ಪುಣ್ಯ ಕಾರ್ಯಕ್ಕೆ ನಾನು ಸದಾ ನಿಮ್ಮ ಜತೆಯಲ್ಲಿ ಇರುತ್ತೇನೆ ಎಂದು ಆಶೀರ್ವದಿಸಿದರು.
ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಅಶೋಕ್‌ಕುಮಾರ್ ಸುರನಾ ಅವರು ಶ್ರೀಗಳನ್ನು ಸ್ವಾಗತಿಸಿ, ಅಭಿನಂದಿಸಿದರು. ಅರಸೀಕೆರೆ ಜೈನ ಸಮಾಜದ ಅಧ್ಯಕ್ಷರಾದ ಪಾರಸಮಲ್ ಮೆಹ್ತಾ, ಸದಸ್ಯರಾದ ಚಂಗನ್ ಲಾಲ್ ಸೋಲಂಕಿ, ಅಮರ ಚಂದ್ ಜೈನ್, ಚೇತನ್ ಜೈನ್, ಮೇಶ್ ಕಟಾರಿಯಾ ಮುಂತಾದವರು ಉಪಸ್ಥಿತರಿದ್ದರು.