ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಅಕ್ರಮ ಮದ್ಯವನ್ನು ಕಚೇರಿ ಆವರಣದಲ್ಲಿ ಎಂ.ಎಚ್.ರಘು ನೇತೃತ್ವದಲ್ಲಿ ನಾಶ ಪಡಿಸಲಾಯಿತು. ಎ.ಆರ್.ಅಪೂರ್ವ, ಸತೀಶ್, ಮಲ್ಲಿಕಾರ್ಜುನ್ ಇತರರಿದ್ದರು.
ಬೇಲೂರು: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಅಕ್ರಮ ಮದ್ಯವನ್ನು ಹಾಸನ ಅಬಕಾರಿ ಉಪ ಅಧೀಕ್ಷಕ ಎಂ.ಎಚ್.ರಘು ಅವರ ನೇತೃತ್ವದಲ್ಲಿ ಪಟ್ಟಣದ ಅಬಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ನಾಶ ಪಡಿಸಲಾಯಿತು.
ಹಾಸನ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಎಚ್.ರಘು ಮಾತನಾಡಿ, ಬೇಲೂರು ಅಬಕಾರಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ 12 ಪ್ರಕರಣಗಳಲ್ಲಿ ವಶಪಡಿಸಿಕೊಂಡ 41.85 ಲೀಟರ್ ಅಕ್ರಮ ಮದ್ಯ, 31.5 ಲೀಟರ್ ಕಳ್ಳಬಟ್ಟಿ ಸಾರಾಯಿ, 87 ಲೀಟರ್ ಬೆಲ್ಲದ ಕೊಳೆ, 30.5 ಲೀ ಬೈನೇ ಸೇಂದಿ, 7 ಪ್ಲಾಸ್ಟಿಕ್ ಕೊಡ, 3 ಪ್ಲಾಸ್ಟಿಕ್ ಕ್ಯಾನ್, 6 ಪ್ಲಾಸ್ಟಿಕ್ ಬಾಟಲ್, ಒಂದು ಬಕೆಟ್ 3 ಮಣ್ಣಿನ ಮಡಕೆ 1 ಅಲ್ಯೂಮಿನಿಯಂ ಕಡುಬಿನ ಪಾತ್ರೆ 1 ಅಲ್ಯೂಮಿನಿಯಂ ಹಂಡೆ 2, ಅಲ್ಯೂಮಿನಿಯಂ ಚಿಕ್ಕ ಪಾತ್ರೆ 1 ಕಬ್ಬಿಣದ ಕುಡಗೋಲನ್ನು ವಶಕ್ಕೆ ಪಡೆಯಲಾಗಿದೆ.
ಬೇಲೂರು ವಲಯದ ಅಬಕಾರಿ ನಿರೀಕ್ಷಕಿ ಎ.ಆರ್, ಅಪೂರ್ವ ಮಾತನಾಡಿ, ಅಬಕಾರಿ ಪಿಎಸ್‌ಐ ಸತೀಶ್, ಸಿಬ್ಬಂದಿ ಮಲ್ಲಿಕಾರ್ಜುನ್ ಸೇರಿದಂತೆ ಇತರರಿದ್ದರು.