ಆಲೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಉದ್ದಿಮೆದಾರರ ಸಭೆಯಲ್ಲಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿದರು.
- ಆಲೂರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಹೇಳಿಕೆ
- ಕಲ್ಯಾಣ ಮಂಟಪ, ಬಾರ್, ಹೋಟೆಲ್, ಬೇಕರಿ ಉದ್ದಿಮೆ ಮಾಲೀಕರ ಸಭೆ
ಆಲೂರು: ಸಾರ್ವಜನಿಕರು, ಉದ್ದಿಮೆದಾರರು ಸ್ವಚ್ಛತೆಗೆ ಸಹಕರಿಸದಿದ್ದರೆ, ದಂಡದ ಜತೆಗೆ ಸೌಲಭ್ಯಗಳ ಕೊರತೆ ಎದುರಿಸಬೇಕಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ತಾಕೀತು ಮಾಡಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಲ್ಯಾಣ ಮಂಟಪ, ಬಾರ್, ಹೋಟೆಲ್, ಬೇಕರಿ ಉದ್ದಿಮೆ ಮಾಲೀಕರ ಸಭೆಯಲ್ಲಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಹೊಸ ಘನತ್ಯಾಜ್ಯ ನಿಯಮಗಳನ್ನು ರೂಪಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಉದ್ದಿಮೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯವೆಂದು ವಿಂಗಡಿಸಿ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಬೇಕು. ಬೇರ್ಪಡಿಸದೆ ನೀಡುವ ಕಸವನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದರು.
ಈಗಾಗಲೇ ತರಕಾರಿ ಅಂಗಡಿ, ಶಾಲೆಗಳಿಗೆ ಕಸ ಸಂಗ್ರಹ ಡಬ್ಬಿಗಳನ್ನು ನೀಡಲಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದ ಮತ್ತು ನಿಯಮ ಉಲ್ಲಂಘಿಸಿದ ವ್ಯಕ್ತಿ, ಕುಟುಂಬದ ವಿವರವನ್ನು ತಾಂತ್ರೀಕರಣದಲ್ಲಿ ಅಪಲೋಡ್ ಮಾಡಲಾಗುವುದು. ಆಗ ದಂಡ ಪಾವತಿಗೆ ತಯಾರಾಗಿರಬೇಕು. ಪ್ರತಿಯೊಂದು ವಿಭಾಗದಲ್ಲಿ ತಾಂತ್ರೀಕರಣ ಹೊಂದಿಕೊಂಡಿರುವುದರಿಂದ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು ಎಂದರು.
ನಿಯಮಗಳನ್ನು ಉಲ್ಲಂಘಸಿದರೆ ಪ್ರಥಮ ಹಂತದಲ್ಲಿ ತಿಳಿವಳಿಕೆ ನೋಟಿಸ್ ನೀಡಲಾಗುತ್ತದೆ. ಎರಡನೆ ಹಂತದಲ್ಲಿ ಉದ್ದಿಮೆಗೆ ನೀರು ಸರಬರಾಜು ನಿಲ್ಲಿಸಲಾಗುವುದು, ಮೂರನೇ ಹಂತದಲ್ಲಿ ವಿದ್ಯುತ್ ಸೌಲಭ್ಯ ನಿಲ್ಲಿಸಲಾಗುವುದು. ಮರು ಸೌಲಭ್ಯ ಪಡೆಯುವ ಸಂದರ್ಭದಲ್ಲಿ ದಂಡವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಯೊಂದು ಅಂಗಡಿ, ಉದ್ದಿಮೆಗಳನ್ನು ಈಗಾಗಲೇ ತಾಂತ್ರೀಕರಣದ ಮೂಲಕ ನೋಂದಣಿ ಮಾಡಲಾಗಿದೆ. ಪ್ರತಿದಿನದ ಚಟುವಟಿಕೆಯನ್ನು ಇದರಲ್ಲಿ ನೋಂದಣಿ ಮಾಡಲಾಗುವುದು. ಉದ್ದಿಮೆ ಮಾಲೀಕರು ಉದ್ದಿಮೆ ವ್ಯಾಪ್ತಿ ಪರಿಸರದ ಸ್ವಚ್ಛತೆ ಕಾಪಾಡುವುದು ಕರ್ತವ್ಯವಾಗಬೇಕು. ಪಟ್ಟಣ ಪಂಚಾಯಿತಿ ಸುಂದರವಾಗಿಡಲು ಪ್ರತಿಯೊಬ್ಬರೂ