ಹೊಳೆನರಸೀಪುರ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ತಾಲೂಕು ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಸಕ್ಷಮ್ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತಾಪಂ ಕಾರ್ಯನಿರ್ವಾಹಣಾಧಿಕಾರಿ ಜಿ. ಮುನಿರಾಜು, ನವೀನ್, ನಿಸರ್ಗಾ, ಚೈತ್ರಾ, ಕೆ.ಸಿ.ವಿಜಯ್ ಇತರರು ಇದ್ದರು. 
ಹಾಸನ

ಮಹಿಳೆ ಸಬಲಳಾದರೆ ಸಮಾಜ ಸದೃಢ

ಪ್ರಮುಖ ಮುಖ್ಯಾಂಶಗಳು

  • women empowered

ಹೊಳೆನರಸೀಪುರ:

ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬ ಮತ್ತು ಸಮಾಜ ಸದೃಢವಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಣಾಧಿಕಾರಿ ಜಿ. ಮುನಿರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ತಾಲೂಕು ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಮತ್ತು ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿಮಟ್ಟದ ಒಕ್ಕೂಟದಿಂದ ಸಕ್ಷಮ್ ಕೇಂದ್ರ (ಆರ್ಥಿಕ ಸಾಕ್ಷರತಾ ಹಾಗೂ ಸೇವಾ ವಿತರಣ ಕೇಂದ್ರ) ಉದ್ಘಾಟಿಸಿ ಮಾತನಾಡಿದರು.
ಸಂಘಟಿತ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ಸಂಬಂಧಿತ ಮಾಹಿತಿ, ನೆರವು ನೀಡಲು ಸಕ್ಷಮ್ ಕೇಂದ್ರ ಪ್ರಾರಂಭಿಸಲಾಗಿದೆ. ಸ್ವಸಹಾಯ ಸಂಘಗಳು ಈ ಕೇಂದ್ರದ ಮೂಲಕ ಸೂಕ್ತ ಮಾಹಿತಿ ಪಡೆದು ಸದೃಢರಾಗಬೇಕೆಂದರು.
ಸಾಮಾಜಿಕ ಜಾಲತಾಣಗಳಲ್ಲಿನ ಡಿಜಿಟಲ್ ವಂಚನೆಯ ಜಾಲಕ್ಕೆ ಬಲಿಯಾಗಬಾರದು. ಈ ನಿಟ್ಟಿನಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಸಂಬಂಧಿತ ಸೇವಾ ಮಾಹಿತಿಗಳನ್ನು ಸಕ್ಷಮ್ ಕೇಂದ್ರದಿಂದ ಪಡೆಯಬೇಕು ಎಂದು ಸಲಹೆ ನೀಡಿದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ನವೀನ್ ಮಾತನಾಡಿ, ಪ್ರತಿಯೊಬ್ಬರೂ ಆರ್ಥಿಕ ಸಾಕ್ಷರತೆ ಹೊಂದುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಬಾಗಿವಾಳು ಗ್ರಾಪಂ ಮಾಜಿ ಸದಸ್ಯ ಹೂವಿನಹಳ್ಳಿ ರುದ್ರಮೂರ್ತಿ, ಪಿಡಿಒ ಕೆ.ಸಿ. ವಿಜಯ್, ಎನ್‌ಆರ್‌ಎಲ್‌ಎಂ ನ ವಲಯ ಮೇಲ್ವಿಚಾರಕಿ ನಿಸರ್ಗಾ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಚೈತ್ರಾ, ಮಂಜುಳಾ, ಕೃಷಿ ಸಖಿ ಸೌಮ್ಯಾ, ಪಶು ಸಖಿ ಸವಿತಾ, ಬ್ಯಾಂಕಿನ ವ್ಯವಹಾರ ಪ್ರತಿನಿಧಿ ಭೂಮಿಕಾ, ಗ್ರಾಪಂ ಮಾಜಿ ಸದಸ್ಯ ಕಡವಿನಕೋಟೆ ರಾಜೇಗೌಡ, ಮುರಳಿ, ರುದ್ರಪ್ಪ, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.