ಅರಕಲಗೂಡು ತಾಲೂಕಿನ ಮುದ್ದನಹಳ್ಳಿ ಗ್ರಾಮದಲ್ಲಿರುವ ಶ್ರೀ ಅರಸೀಕಟ್ಟೆ ಸುಕ್ಷೇತ್ರದ ಸಭಾಂಗಣದಲ್ಲಿ ಎ.ಟಿ. ರಾಮಸ್ವಾಮಿ ಅಭಿನಂದನಾ ಗ್ರಂಥ ಹೊರತರುವ ನಿಟ್ಟಿನಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಪ್ರೊ. ಜಯಪ್ರಕಾಶ್ ಗೌಡ ಉದ್ಘಾಟಿಸಿದರು. ಡಾ. ಎ. ರಾಮಸ್ವಾಮಿ, ವೆಂಕಟೇಶ್, ಬಿ.ಕೆ. ಮಂಜುನಾಥ್, ಜನಾರ್ದನ್ ಗುಪ್ತ ಇತರರಿದ್ದರು. 
ಹಾಸನ

ಉತ್ತಮರನ್ನು ಗುರುತಿಸದಿದ್ದರೆ ಮನುಕುಲಕ್ಕೆ ಅಧೋಗತಿ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಭಿಮತ
ಅರಕಲಗೂಡು : ಇತಿಹಾಸ ಸೃಷ್ಟಿಸುವ ಸದುದ್ದೇಶದಿಂದ ಸಾಧಕರ ಸಾಧನೆಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.
ತಾಲೂಕಿನ ಮುದ್ದನಹಳ್ಳಿ ಗ್ರಾಮದಲ್ಲಿರುವ ಶ್ರೀ ಅರಸೀಕಟ್ಟೆ ಸುಕ್ಷೇತ್ರದ ಸಭಾಂಗಣದಲ್ಲಿ ಶನಿವಾರ ಮೈಸೂರು ಎ.ಟಿ. ರಾಮಸ್ವಾಮಿ ಅಭಿನಂದನಾ ಗ್ರಂಥ ಸಮಿತಿ ವತಿಯಿಂದ ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಭಿನಂದನಾ ಗ್ರಂಥ ಹೊರತರುವ ನಿಟ್ಟಿನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸುಸಂಸ್ಕೃತರು, ಉತ್ತಮರನ್ನು ಗುರುತಿಸದಿದ್ದರೆ ದುರ್ಜನರನ್ನು ವಿಜೃಂಭಿಸಿದಂತಾಗಿ ಮನುಕುಲ ಅಧೋಗತಿಗೆ ತಲುಪುತ್ತದೆ. ಸಾಮಾನ್ಯ ಕುಟುಂಬದಲ್ಲಿ ಬಂದ ರಾಮಸ್ವಾಮಿ ಅವರು ಜನಸೇವಕರಾಗಿ ಗಡಿ, ಜಾತಿ, ಧರ್ಮವನ್ನು ಮೀರಿದ ಮಾದರಿಯಾದ ವ್ಯಕ್ತಿತ್ವ ಸಂಪಾದಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂತಹ ಸಾಧಕರ ಸಾಧನೆಯನ್ನು ಇತಿಹಾಸದಲ್ಲಿ ಉಳಿಸಿದರೆ ತಲೆಮಾರುಗಳ ತನಕ ಮುಂದಿನ ಪೀಳಿಗೆಗೂ ಮಾರ್ಗದರ್ಶಕವಾಗಲಿದೆ. ಇಂತವರು ರಾಜಕಾರಣದಲ್ಲೂ ಉಳಿಯಬೇಕು. ಪರಿಸರದ ಉಳಿವಿಗಾಗಿ ಶ್ರಮಿಸುತ್ತಿರುವ ರಾಮಸ್ವಾಮಿ ಅವರು ಸಕ್ರಿಯ ರಾಜಕಾರಣದಲ್ಲಿ ಇದ್ದೂ ಉತ್ತಮ ಕೆಲಸಗಳನ್ನು ಮಾಡಬಹುದು ಎಂದರು.
ಮೈಸೂರು ಮುಕ್ತ ವಿವಿ ನಿವೃತ್ತ ಕುಲಸಚಿವ ಡಾ.ಎ.ರಂಗಸ್ವಾಮಿ ಮಾತನಾಡಿ, ಅಪಾರ ವಿಚಾರವಂತರಾದ ರಾಮಸ್ವಾಮಿ ಅವರ ಸಾಧನೆಗಳನ್ನು ಇತಿಹಾಸದಲ್ಲಿ ದಾಖಲಿಸುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಹಿರಿಯ ಪತ್ರಕರ್ತ, ಚಿಂತಕ ಹಾಸನ ವೆಂಕಟೇಶ್ ಮಾತನಾಡಿ, ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿತ್ವದ ರಾಮಸ್ವಾಮಿ ಅವರಿಂದ ಸಮಯ ಪ್ರಜ್ಞೆ, ಸೇವಾ ಬದ್ಧತೆಯನ್ನು ಕಲಿಯುವುದು ಸಾಕಷ್ಟಿದೆ. ಮುಂದಿನ ಪೀಳಿಗೆಗೆ ಇವರ ಇತಿಹಾಸ ಸ್ಪೂರ್ತಿದಾಯಕವಾಗಲಿದೆ ಎಂದು ಬಣ್ಣಿಸಿದರು.
ಉಪನ್ಯಾಸಕಿ ಮೈಸೂರು ಕೆಂಪಮ್ಮ ಮಾತನಾಡಿ, ರಾಮಸ್ವಾಮಿ ಅವರ ಕುರಿತಾದ ಇನ್ನಷ್ಟು ಲೇಖನಗಳನ್ನು ಕಳುಹಿಸುವಂತೆ ಮನವಿ ಮಾಡಿದರು. 
ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ವಕೀಲ ಎ.ಆರ್. ಜನಾದರ್ನ್ ಗುಪ್ತ ಮಾತನಾಡಿದರು. ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಜಿ ನಿರ್ದೇಶಕ ಬಿ.ಕೆ. ಬಸವರಾಜು, ಪ್ರಾಧ್ಯಾಪಕ ಡಾ.ಬಿ.ಈ. ಯೋಗೇಂದ್ರ, ಉದ್ಯಮಿ ಎ.ಜಿ. ರಾಮನಾಥ್, ತಾಪಂ ಮಾಜಿ ಅಧ್ಯಕ್ಷರಾದ ಕೇಶವಮೂರ್ತಿ, ಎಚ್. ಮಾದೇಶ್, ಬೋರೇಗೌಡ, ಆಲೂರು ರಾಧಮ್ಮ ಜನಸ್ಪಂದನ ಸಂಸ್ಥೆ ಅಧ್ಯಕ್ಷ ಹೇಮಂತ್ ಕುಮಾರ್, ಹಾಸನ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಅಧೀಕ್ಷಕ ಕೆ. ಮಂಜೇಗೌಡ, ನಿವೃತ್ತ ಪ್ರಾಂಶುಪಾಲ ಬಸವರಾಜು, ಉಪನ್ಯಾಸಕ ಪ್ರೊ. ಶಶಿಕುಮಾರ್, ಡಾ. ಗಿರೀಶ್, ಚನ್ನರಾಯಪಟ್ಟಣ ತಮ್ಮಣ್ಣಗೌಡ, ಹಾನಗಲ್ ಚಂದ್ರಶೇಖರ್, ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಇತರರಿದ್ದರು.