ಎಚ್.ಕೆ.ಸುರೇಶ್ 
ಹಾಸನ

ಹೆಬ್ಬಾಳು ನೀರಾವರಿ ಯೋಜನೆ ನಾನೇ ಮಾಡಿಸುವೆ

ಕಿರಣ್ ಗೌಡ.ಜಿ

ಬೇಲೂರು:

ರಣಘಟ್ಟ ಯೋಜನೆ ಯಾರ ಶ್ರಮ ಎಂದು ನಾಡಿನ ಜನತೆಗೆ ಗೊತ್ತು. ಹೆಬ್ಬಾಳು ಏತ ನೀರಾವರಿ ಯೋಜನೆ ಅವರೇನು ಮಾಡುವುದು ನಾನೇ ಕೆಲಸ ಮಾಡಿಸಿ ತೋರಿಸುತ್ತೇನೆ.

ಬೇಕಿದ್ದರೆ ಚರ್ಚೆಗೆ ಬರಲಿ. ನನ್ನ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಲಿ, ಅವರ ಪಕ್ಷದಲ್ಲೇ ಹುಳುಕಿಟ್ಟುಕೊಂಡು ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮಾಜಿ ಸಚಿವ ಬಿ.ಶಿವರಾಮ್‌ಗಿಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ಕಿಡಿಕಾರಿದರು.

ಹೆಬ್ಬಾಳು ಏತ ನೀರಾವರಿಗೆ 2023ರಲ್ಲಿ ಡಿಪಿಆರ್ ಆಗಿತ್ತು. 1.76 ಕೋಟಿ ರೂ.ಅನುದಾನದಲ್ಲಿ 6 ಗ್ರಾಮ ಪಂಚಾಯಿತಿ 61 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಈ ಬಗ್ಗೆ 3 ಬಾರಿ ಸದನದಲ್ಲಿ ಮಾತನಾಡಿದ್ದೇನೆ. ನಾರ್ವೆ ಇಂದಿ ಲಿಫ್ಟ್ ಇರಿಗೇನ್ ಮೂಲಕ ಶಾಶ್ವತವಾಗಿ ನೀರು ಕೊಡಬೇಕೆಂದು ಒತ್ತಾಯಿಸಿದ್ದೇನೆ ತೆಗೆದು ನೋಡಲಿ. ಮೇಜರ್ ಇರಿಗೇಷನ್‌ಗೆ ಅಪ್ರೂವಲ್‌ಗೆ ಕಳುಹಿಸಲಾಗಿದೆ. ಇಲ್ಲಿ ನನಗೆ ರೈತರ ಮತ್ತು ಬಡವರ ಹಿತಾಸಕ್ತಿಯೇ ಹೊರತು ರಾಜಕಾರಣಕ್ಕೆ, ವಸೂಲಿಗೆ ಇಲ್ಲಿಗೆ ಬಂದಿಲ್ಲ. ಸೇವೆಗೆ ಬಂದಿದ್ದೇನೆ ಎಂದು ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ಬಿ.ಶಿವರಾಮ್ ಅವರು ಪ್ರಥಮ ಬಾರಿಗೆ ಶಾಸಕರಾದಾಗಿನಿಂದ ಇಲ್ಲಿವರೆಗೂ ಏನೇನು ಮಾಡಿದ್ದಾರೆ ಎಂಬುದು ನನ್ನ ಬಳಿ ಮಾಹಿತಿ ಇದೆ. ನಾನು ಅದೇ ಕ್ಷೇತ್ರದವನು. ಬೇಲೂರಿನ ಮುಗ್ಧ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು, ಕೆಲಸದಿಂದ ತೆಗೆಯುವುದು ಮತ್ತೆ ಕೆಲಸ ಕೊಡಿಸುವುದು ಅದಕ್ಕೆ ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿಯು ನನ್ನ ಬಳಿ ಇದೆ. ನಾನು ಯಾವುದಕ್ಕೂ ಎದರುವವನಲ್ಲ, ಅವರು ಜಾತಿ, ಪಕ್ಷ, ನಡುವೆ ಜಗಳ ತರುವಲ್ಲಿ ನಿಸ್ಸೀಮರು, ಅವರ ಸವಾಲನ್ನು ನಾನೇಕೆ ಸ್ವೀಕರಿಸಲಿ. ಪುರಸಭೆ ಮಳಿಗೆಗಳ ಹರಾಜಿನಲ್ಲಿ ನಡೆದಿರುವ ಅವ್ಯವಹಾರ ಗೊತ್ತಿದೆ ಎದುರಿಗೆ ಬಂದು ಸವಾಲು ಹಾಕಲಿ, ನನ್ನ ಎದುರು ಡಿಬೇಟ್‌ಗೆ ಬರಲಿ ಎಂದರು.