ಚಿಕ್ಕಗಂಡಸಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡ ಶ್ರೀ ಕೊಲ್ಲಾಪುರದಮ್ಮ ದೇವಿಯವರ ಶಿಲಾವಿಗ್ರಹ ಮೂರ್ತಿ. 
ಹಾಸನ

ದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ

ಎ. ಆರ್. ರಘುರಾಮ

ಗಂಡಸಿ: ಹೋಬಳಿಯ ಚಿಕ್ಕ ಗಂಡಸಿ ಗ್ರಾಮದಲ್ಲಿ ಶ್ರೀ ಕೊಲ್ಲಾಪುರದಮ್ಮ ದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಭಾನುವಾರ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.

ಶನಿವಾರ ಸಂಜೆ ಗೊಲ್ಲರಹಳ್ಳಿ ಶ್ರೀ ಪ್ಲೇಗಿ ನಮ್ಮದೇವಿ, ಬಿದುರೆಗುಡಿ ಶ್ರೀ ಬಿದಿರಾಂಬಿಕಾದೇವಿ, ಚಿಕ್ಕಗಂಡಸಿ ಶ್ರೀ ಬೀರಲಿಂಗೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ ಉತ್ಸವದೊಂದಿಗೆ ಅರಸೀಕೆರೆಯ, ಶಿವಪ್ರಸಾದ್ ಶಾಸಿ ಮತ್ತು ತಂಡದವರಿಂದ ಗಂಗಾ ಪೂಜೆ, ಗೋ ಪೂಜೆ, ನೂತನ ಶಿಲಾಮೂರ್ತಿ ಆಲಯಕ್ಕೆ ಆಗಮನ ನಂತರ ಪುಣ್ಯಹ ಪಂಚ ಕಳಸ ಸ್ಥಾಪನೆ, ಗಣ ಹೋಮ, ವಾಸ್ತು ಹೋಮ, ವಾಸ್ತು ಬಲಿ ಇತ್ಯಾದಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ಭಾನುವಾರ ಬೆಳಗ್ಗೆ 10 ಗಂಟೆಗೆ ತಿಪಟೂರು ತಾ. ಕೆರಗೋಡಿ ರಂಗಾಪುರ ಮಠದ ಪೀಠಾಧ್ಯಕ್ಷ ಗುರುಪರ ದೇಶಿಕೇಂದ್ರ ಸ್ವಾಮೀಜಿ ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಕೊಲ್ಲಾಪುರದಮ್ಮ ದೇವಿಯ ನೂತನ ಶಿಲಾಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.
ಎರಡು ದಿನಗಳ ಕಾಲ ಭಕ್ತಾದಿಗಳಿಗೆ ನಿತ್ಯ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.