ನುಗ್ಗೇಹಳ್ಳಿ ಹೋಬಳಿಯ ದುಗ್ಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಪುಟ್ಟಮ್ಮ ಬೆಟ್ಟೇಗೌಡ ಅವರ ವಾಸದ ಮನೆಗೋಡೆ, ಮೇಲ್ಚಾವಣಿ ಕುಸಿದು ಹಾನಿ ಸಂಭವಿಸಿದೆ.  
ಹಾಸನ

ಧಾರಾಕಾರ ಮಳೆಗೆ ಮನೆಗೆ ಹಾನಿ

ಪ್ರಮುಖ ಮುಖ್ಯಾಂಶಗಳು

  • torrential rain
ನುಗ್ಗೇಹಳ್ಳಿ: ಹೋಬಳಿಯ ದುಗ್ಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಪುಟ್ಟಮ್ಮ ಬೆಟ್ಟೇಗೌಡ ಅವರ ವಾಸದ ಮನೆಗೋಡೆ, ಮೇಲ್ಚಾವಣಿ ಕುಸಿದು ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಇತರೆ ವಸ್ತುಗಳು ಹಾಳಾಗಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಪುಟ್ಟಮ್ಮ ಕುಟುಂಬದ 5 ಜನ ಸದಸ್ಯರಿಗೆ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಿದ್ದಾರೆ.