ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಿಂಭಾಗದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಸೋಮವಾರ ರಾತ್ರಿ ಕಾಮ ದಹನ ನೆರವೇರಿಸಲಾಯಿತು. 
ಹಾಸನ

ಬೇಲೂರಿನಲ್ಲಿ ಕಾಮ ದಹನ ಆಚರಣೆ

ಬೇಲೂರು: ಹೋಳಿ ಹಬ್ಬದ ಅಂಗವಾಗಿ ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಿಂಭಾಗದ ಕಾಮ ದಹನ ಮೂಲೆಯಲ್ಲಿ ನೂರಾರು ಜನರ ಸಮ್ಮುಖದಲ್ಲಿ ಸೋಮವಾರ ರಾತ್ರಿ ಕಾಮದಹನ ನೆರವೇರಿಸಲಾಯಿತು.
ರಾಘವೇಂದ್ರ ಮಠದ ವ್ಯವಸ್ಥಾಪಕ, ವೈದಿಕ ವಿದ್ವಾನ್ ಸುಧೀಂದ್ರಾಚಾರ್ ಮಾತನಾಡಿ, ನಮ್ಮಲ್ಲಿರುವ ಲೋಭ, ಮದ, ಮತ್ಸರಗಳನ್ನೆಲ್ಲ ಸುಟ್ಟು ಹಾಕಿ ಕೆಟ್ಟ ಗುಣಗಳನ್ನು ದೂರ ಮಾಡಬೇಕೆಂದು ಕಾಮ ದಹನ ಮಾಡುತ್ತೇವೆ. ಕಾಮವನ್ನು ಸುಟ್ಟು ಒಳ್ಳೆ ಧ್ಯಾನ ಮಾರ್ಗ ಪಾಲಿಸಬೇಕು. ಇಡೀ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವಿಶೇಷವಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ರಂಗಪಂಚಮಿ ಎಂದು ಆಚರಿಸುತ್ತಾರೆ. ಮುಂಬರುವ ಚೈತ್ರ ಮಾಸವನ್ನು ಬರಮಾಡಿಕೊಳ್ಳಲು ಸಹ ಆಚರಿಸಲಾಗುತ್ತದೆ ಎಂದರು.
ಕಾಮದಹನ ಸಮಿತಿಯ ಲಕ್ಷ್ಮೀಕಾಂತ್ ಚಾವುಡ, ಫಣೀಂದ್ರ, ಬ್ಯಾಂಕ್ ಮಂಜುನಾಥ್, ತೀರ್ಥಂಕರ್, ಉದ್ಯಮಿ ಸಂತೋಷ್, ಸೌಮ್ಯಾ ಆನಂದ್, ರಾಮು, ರಾಘವೇಂದ್ರ ಯೋಗ ಶಿಬಿರದ ರಾಘವೇಂದ್ರ ಗುಪ್ತ, ಯೋಗೀಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಪೊಲೀಸ್ ಸಿಬ್ಬಂದಿ ದೇವರಾಜ್ ಇದ್ದರು.