ಹೊಳೆನರಸಿಪುರ ತಾಲೂಕಿನ ದೊಡ್ಡ ಕಾಡನೂರು ಗ್ರಾಮ ಪಂಚಾಯಿತಿಯ ಚಿಕ್ಕ ಕಾಡನೂರು ಗ್ರಾಮದಲ್ಲಿ ಕರ ವಸೂಲಿ ಮಾಸಾಚರಣೆ ಮಾಡಲಾಯಿತು. ಪಿಡಿಒ ಜ್ಯೋತಿ ಕಾರ್ಯದರ್ಶಿ ಶಿವಣ್ಣ ಸಂಗೀತ ಇದ್ದರು. 
ಹಾಸನ

ಕಂದಾಯ ವಸೂಲಾತಿ ಆಂದೋಲನ

ಎ. ಆರ್. ರಘುರಾಮ
ಹೊಳೆನರಸೀಪುರ ಸಾರ್ವಜನಿಕರು ಮನೆ, ನೀರು ಹಾಗೂ ಬೀದಿ ದೀಪದ ಕಂದಾಯವನ್ನು ಸಕಾಲಕ್ಕೆ ಸಂದಾಯ ಮಾಡಬೇಕೆಂದು ದೊಡ್ಡ ಕಾಡನೂರು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಶಿವಣ್ಣ ಹೇಳಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ದೊಡ್ಡ ಕಾಡನೂರು ಗ್ರಾಮ ಪಂಚಾಯಿತಿ ಕಾರ್ಯಲಯದ ವತಿಯಿಂದ ಚಿಕ್ಕ ಕಾಡನೂರು ಗ್ರಾಮದಲ್ಲಿ ಬುಧವಾರ ಕಂದಾಯ ವಸೂಲಾತಿ ಆಂದೋಲನ ಕಾರ್ಯಕ್ರಮ ಪ್ರಯುಕ್ತ ಸಾರ್ವಜನಿಕರಿಗೆ ಮಾಹಿತಿ ನೀಡುತ್ತ ಮಾತನಾಡಿದರು
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ತೆರಿಗೆ ವಸೂಲಾತಿಯು ತುಂಬಾ ಕಡಿಮೆಯಾಗಿದ್ದು, ತೆರಿಗೆ ಕಟ್ಟಲು ಕೆಲವರು ಹಿಂದೆ ಮುಂದೆ ಯೋಚಿಸುತ್ತಾರೆ. ಗ್ರಾಮಗಳ ಅಭಿವೃದ್ಧಿ ಆಗಬೇಕೆಂದರೆ ಕಂದಾಯವನ್ನು ಎಲ್ಲರೂ ಆರ್ಥಿಕ ವರ್ಷದ ಅವಧಿಯೊಳಗೆ ಖುದ್ದು ಕಚೇರಿಗೆ ಭೇಟಿ ನೀಡಿ ಕಟ್ಟಬೇಕು. ನಿಮಗೆ ದೊರೆಯಬೇಕಾದ ಸೌಲಭ್ಯಗಳನ್ನ ಗ್ರಾಮ ಪಂಚಾಯಿತಿಯಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಣ್ಣೇ ಚಾಕನಹಳ್ಳಿ 613691 ರೂಗಳು,ಆಲಗೌಡನಹಳ್ಳಿ 433643 ರೂಗಳು, ಬಂಟರತಳಾಲು 188051 ರೂಗಳು, ಬಾಚನಹಳ್ಳಿ 718387 ರೂಗಳು, ಹಿಂದಲಹಳ್ಳಿ 298681 ರೂಗಳು, ಮಲ್ಲೇನಹಳ್ಳಿ ಗ್ರಾಮದಲ್ಲಿ 225224 ರೂಗಳು, ದಾಳಗೌಡನಹಳ್ಳಿ 819360 ರೂಗಳು,
ಚಿಕ್ಕ ಕಾಡನೂರು ಗ್ರಾಮದಲ್ಲಿ445844 ರೂಗಳು
ಮೆಣಗನಹಳ್ಳಿ ಗ್ರಾಮ 719508 ರೂಗಳು
ದೊಡ್ಡಕಾಡನೂರು 1369487 ರೂ ಇದ್ದು, ಒಟ್ಟು 5832181 ತೆರಿಗೆ ಬಾಕಿ ಇರುತ್ತದೆ. ಆದ್ದರಿಂದ ನಿಮ್ಮ ಮನೆ ಮತ್ತು ನೀರಿನ ಕಂದಾಯವನ್ನು ಸಕಾಲಕ್ಕೆ ಪಾವತಿಸಿ ನಿಮ್ಮ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಕಾರ್ಯದರ್ಶಿ ಸಂಗೀತ, ಕರಾ ವಸಲಿಗಾರ ಸೋಮಶೇಖರ್, ನೀರು ಗಂಟಿಗಳಾದ ನಾಗರಾಜು ಅಶೋಕ್, ಜವರೇಗೌಡ ,ರೇವಣ್ಣ ಮತ್ತಿತರರು ಇದ್ದರು.