ಹೊಳೆನರಸೀಪುರ ತಾಲೂಕಿನ ಬಾಗೀವಾಳು ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿಗಳನ್ನು ಸನ್ಮಾನಿಸಲಾಯಿತು. ಕೆ.ಸಿ. ವಿಜಯ್ , ಕೆ.ಎಂ.ನಾಗರಾಜು, ಈ.ಬಿ. ಚಿದಾನಂದ, ಬಿ ಉಮೇಶ್ ಇತರರಿದ್ದರು. 
ಹಾಸನ

ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಎ. ಆರ್. ರಘುರಾಮ
*ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಪಿ. ಗೋಪಾಲ್ ಹೇಳಿಕೆ
ಹೊಳೆನರಸೀಪುರ : ಹಕ್ಕುಗಳನ್ನು ಹೇಗೆ ಪ್ರತಿಪಾದಿಸುತ್ತೇವೆಯೋ ಹಾಗೆಯೇ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಪಿ. ಗೋಪಾಲ್ ಹೇಳಿದರು.
ಶನಿವಾರ ತಾಲೂಕಿನ ಬಾಗಿವಾಳು ಗ್ರಾಮ ಪಂಚಾಯಿತಿ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಸ್ತುತ ಸಮಾಜಕ್ಕೆ ದೇಶಪ್ರೇಮ ಬಾಂಧವ್ಯ ಸಂಬಂಧಗಳ ಮೌಲ್ಯ ನಾಗರಿಕ ಪ್ರಜೆ ಹೆಚ್ಚಿಸುವಂಥ ಶಿಕ್ಷಣದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಿಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ತಾಪಂ ಮಾಜಿ ಸದಸ್ಯ ಬಾಗಿವಾಳು ಬಸವರಾಜು ಮಾತನಾಡಿ, ಸ್ವಾತಂತ್ರ್ಯವೆಂಬುದು ಬ್ರಿಟಿಷರು ನಮಗಾಗಿ ಬಿಟ್ಟು ಹೋದ ಬಳುವಳಿಯಲ್ಲ, ಅದು ಸಾವಿರಾರು ಜನರ ತ್ಯಾಗ ಬಲಿದಾನಗಳ ಹೋರಾಟದ ಫಲ. ಅಂದಿನ ಕಾಲದಲ್ಲಿ 10 ವರ್ಷದ ಯುವಕರಿಂದ 80 ವರ್ಷದ ವೃದ್ಧ್ದರವರೆಗೂ ಪರಕೀಯರ ಬಿಡುಗಡೆಯಿಂದ ಭಾರತವನ್ನು ಸ್ವತಂತ್ರಗೊಳಿಸಲು ಬಲಿದಾನ ಮಾಡಿದ್ದಾರೆ. ಆದ್ದರಿಂದ ಸ್ವಾತಂತ್ರ್ಯ ಸಂರಕ್ಷಣೆ ಮಾನವೀಯ ಮೌಲ್ಯಗಳ ಪ್ರತಿಪಾದನೆ ಹೆಜ್ಜೆ ಹೆಜ್ಜೆಗೂ ಸಮಾಜದಲ್ಲಿ ಪ್ರತಿಧ್ವನಿಸಬೇಕು ಎಂದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸ ಮಾಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಬಿಚೇನಹಳ್ಳಿ ಗ್ರಾಮದ ಎಚ್.ಎಂ. ಜಾಹ್ನವಿ, ಬಾಗಿವಾಳು ಗ್ರಾಮದ ಪ್ರಾರ್ಥನಾ, ಭವಾನಿ, ಪಿಯುಸಿ ವಿಭಾಗದಲ್ಲಿ ಕೆ.ಎಸ್. ಸುಹಾಸ್ ಕಡವಿನ ಹೊಸಹಳ್ಳಿ, ಆಶಾ ಬೀಚೇನಹಳ್ಳಿ, ಗಂಗಮಾಳಮ್ಮ ಕಡವಿನಹೊಸಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಗ್ರಂಥ ಪಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಬಾಗಿವಾಳು ಗ್ರಾಮದ ರುದ್ರೇಶ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ.ವಿಜಯ್, ಕೆ.ಎಂ.ನಾಗರಾಜು, ಈ.ಬಿ. ಚಿದಾನಂದ, ಬಿ ಉಮೇಶ್, ಭವ್ಯಾ, ರವಿಕುಮಾರ್, ಪ್ರಭು, ಕೃಷ್ಣ, ಶೆಟ್ಟಿ ನಾಗರಾಜು, ಬಿ.ವಿ. ರುದ್ರಪ್ಪ, ಇತರರಿದ್ದರು.