ಹೊಳೆನರಸೀಪುರ ತಾಲೂಕಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಹೊಳೆನರಸೀಪುರ. : 77ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಶ್ರೀ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಯಿತು. ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಟಿ .ಲಕ್ಷ್ಮಣ ಮಾತನಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಅದ್ಭುತ ಸಂವಿಧಾನವನ್ನು ರಚಿಸಿ ನಮ್ಮ ದೇಶಕ್ಕೆ ಅರ್ಪಣೆ ಮಾಡಿರುವ ಬಾಬಾ ಸಾಹೇಬರು ದೇಶದ ಕೋಟ್ಯಂತರ ಜನರ ಹೃದಯದಲ್ಲಿದ್ದಾರೆ . ಕಾಂಗ್ರೆಸ್ ಪಕ್ಷ ಸಂವಿಧಾನದ ಉಳಿವು, ಬೆಳವಣಿಗೆ, ರಕ್ಷಣೆಗಾಗಿ ಸದಾ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಹಂತದಲ್ಲಿಯೂ ಸಂವಿಧಾನವನ್ನು ಬಲಗೊಳಿಸಲು ಹೊರಟಿರುವುದು ಹೆಮ್ಮೆಯ ವಿಷಯ. ಸಂವಿಧಾನದ ಮೂಲ ಆಶಯಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಪೂರಕವಾಗಿ ಕಾಂಗ್ರೆಸ್ ಪಕ್ಷದ ಸಂಸದರುಗಳು ದೇಶಾದ್ಯಂತ ಹೋರಾಟವನ್ನು ರೂಪಿಸುವುದರ ಮೂಲಕ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂವಿಧಾನವನ್ನು ಉಳಿಸುವ ಜಯ ಘೋಷದೊಂದಿಗೆ ಸಂವಿಧಾನದ ಮಹತ್ವವನ್ನು ವಿಶ್ವದೆಲ್ಲೆಡೆ ತಿಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕೋಮುವಾದಿಗಳು, ಜಾತಿವಾದಿಗಳು, ಸಂವಿಧಾನ ವಿರೋಧಿಗಳು, ಮನುವಾದಿಗಳು ಬಾಬಾ ಸಾಹೇಬರ ವಿಚಾರ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್. ಡಿ. ಬಸವರಾಜು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ತಾಲೂಕು ಅಧ್ಯಕ್ಷ ಶಿವಕುಮಾರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶೃತಿ,ಕಾಂಗ್ರೆಸ್ ಮುಖಂಡರುಗಳಾದ ಬಿ .ಎಂ .ಬಸವರಾಜು, ಮುಜಾಹಿದ್ ಪಾಷಾ, ರಿಯಾಜ್ ಪಾಷಾ, ಪುಟ್ಟರಾಜು, ಶಿವಣ್ಣ, ರವಿಕುಮಾರ್, ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಜಿಷನ್ ಅಲಿ, ಮುಬಾರಕ್, ಗೋವಿಂದರಾಜು, ಯೋಗಣ್ಣ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಸೋಮೇಗೌಡ, ಯುವ ಕಾಂಗ್ರೆಸ್ ನ ಪವನ್ ಕುಮಾರ್, ಜಗನ್, ರಘು, ರಾಘವೇಂದ್ರ, ರಂಗಸ್ವಾಮಿ, ಸೇರಿದಂತೆ ಗ್ಯಾರೆಂಟಿ, ಕೆ.ಡಿ.ಪಿ . ಆಶ್ರಯ ಸಮಿತಿಯ ಕೆಲವು ನಾಮ ನಿರ್ದೇಶೀತ ಸದಸ್ಯರುಗಳು, ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.