ಶ್ರವಣಬೆಳಗೊಳ ಹೋಬಳಿಯ ಎಸ್.ಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು. ಎಚ್.ಕೆ.ನವೀನ್, ಎಚ್.ಕೆ.ಕಾಂತರಾಜ್, ಗೌರಮ್ಮ ನಾಗೇಗೌಡ, ವಿನೋದ ಸುಕುಮಾರ್, ದ್ರಾಕ್ಷಾಯಿಣಿ ಅರುಣ್ ಕುಮಾರ್ ಇತರರಿದ್ದರು.
- ಉಪಾಧ್ಯಕ್ಷರಾಗಿ ಎಚ್.ಕೆ.ಕಾಂತರಾಜ್ ಅವಿರೋಧವಾಗಿ ಆಯ್ಕೆ
ಶ್ರವಣಬೆಳಗೊಳ: ಹೋಬಳಿಯ ಎಸ್.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಕೆ.ನವೀನ್, ಉಪಾಧ್ಯಕ್ಷರಾಗಿ ಎಚ್.ಕೆ.ಕಾಂತರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ 11 ನಿರ್ದೇಶಕರು ಆಯ್ಕೆಯಾಗಿದ್ದರು. ಬುಧವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಚ್.ಕೆ.ನವೀನ್ ಹಾಗೂ ಎಚ್.ಕೆ.ಕಾಂತರಾಜ್ ಹೊರತುಪಡಿಸಿ ಮತ್ತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿ ಬಿ.ಕೆ.ವಿಜಯೇಂದ್ರ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಗೌರಮ್ಮ ನಾಗೇಗೌಡ, ವಿನೋದ ಸುಕುಮಾರ್, ದ್ರಾಕ್ಷಾಯಿಣಿ ಅರುಣ್ ಕುಮಾರ್, ರಮೇಶ್, ಪಾರ್ವತಮ್ಮ, ಸುಮಾ ವಿಜಯಕುಮಾರ್, ಶ್ರುತಿ ಮಂಜೇಗೌಡ, ಸುಜಾತಾ ನಾಗರಾಜ್, ಜಯಲಕ್ಷ್ಮೀ ನಾಗರಾಜ್, ಸಂಘದ ಕಾರ್ಯದರ್ಶಿ ಮಂಜೇಗೌಡ, ಹಾಲು ಪರೀಕ್ಷಕ ಎಚ್.ಎಸ್.ನವೀನ್, ರೈತ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ ಇತರರು ಇದ್ದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸಹಳ್ಳಿ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಸಿಹಿ ವಿತರಿಸಿ, ಅಭಿನಂದನೆ ಸಲ್ಲಿಸಿದರು.