ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎಚ್‌ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು ಉದ್ಘಾಟಿಸಿದರು. ವಿ.ರವಿಕುಮಾರ್ ಬಲ್ಲೇನಹಳ್ಳಿ, ಪುಟ್ಟರಾಜು ಇದ್ದರು. 
ಹಾಸನ

ಎಚ್‌ಐವಿ ಹರಡದಂತೆ ಜಾಗ್ರತೆ ವಹಿಸಿ

ಲಲಾಟಾಕ್ಷ ಎಸ್
ಆಲೂರು: ಎಚ್‌ಐವಿ ಸೋಂಕು ತಡೆಗಟ್ಟಲು ಜನ ಸಾಮಾನ್ಯರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಅಗತ್ಯ ಎಂದು ಹಾಸನ ಡ್ಯಾಫ್ಕೊ ಮೇಲ್ವಿಚಾರಕ ವಿ.ರವಿಕುಮಾರ್ ಬಲ್ಲೇನಹಳ್ಳಿ ತಿಳಿಸಿದರು.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ವತಿಯಿಂದ, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎಚ್‌ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1981ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಎಚ್‌ಐವಿ/ಏಡ್ಸ್ ಸೋಂಕು ರೋಗ ನಮ್ಮ ದೇಶಕ್ಕೂ ವ್ಯಾಪಿಸಿದೆ. ಇದು ಮುಂದಿನ ಪೀಳಿಗೆಗೆ ಹರಡದಂತೆ ಜಾಗೃತರಾಗುವುದು ಅಗತ್ಯವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಟಿ.ಪಿ.ಪುಟ್ಟರಾಜು ಮಾತನಾಡಿ, ಎಚ್‌ಐವಿ ಸೋಂಕಿತರನ್ನು ಗೌರವದಿಂದ ಕಾಣಬೇಕು. ರೋಗ ಹರಡದಂತೆ ಮುಂಜಾಗ್ರತೆ ಕ್ರಮವಹಿಸುವುದರ ಜತೆಗೆ ಪ್ರತಿಯೊಬ್ಬರೂ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಂ.ಎಸ್.ರಕ್ಷಿತಾ, ಮದೀಶ ತಮ್ಮಿನ್, ಎಚ್.ಡಿ.ಪ್ರೀತಂ ಅವರಿಗೆ ಬಹುಮಾನ ವಿತರಿಸಲಾಯಿತು. ರೆಡ್ ರಿಬ್ಬನ್ ಕ್ಲಬ್‌ನ ಸಂಚಾಲಕ ಡಾ.ರಾಘವೇಂದ್ರ, ಇತಿಹಾಸ ವಿಭಾಗದ ಮುಖ್ಯಸ್ಥ ನಟರಾಜ್, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಡಾ.ಟಿ.ಕೆ.ಸರಿತಾ ಹಾಜರಿದ್ದರು.