ಅರಕಲಗೂಡು ತಾಲೂಕು ದೊಡ್ಡಮಗ್ಗೆ ಗ್ರಾಮದಲ್ಲಿ ಸೋಮವಾರ ಸುರಿದ ಮಳೆ ಬಿರುಗಾಳಿಗೆ ಮರದಡಿ ನಿಂತಿದ್ದ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಗ್ಲಾಸ್ ಒಡೆದು ಹಾನಿಗೀಡಾಗಿದೆ.
ಅರಕಲಗೂಡು: ತಾಲೂಕಿನ ಹಲವೆಡೆ ಸೋಮವಾರ ಗುಡುಗು ಬಿರುಗಾಳಿ ಸಹಿತ ಮಳೆ ಸುರಿದು ಇಳೆಗೆ ತಂಪೆರೆಯಿತು.
ದೊಡ್ಡಮಗ್ಗೆ ಮತ್ತು ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಮಳೆ ಬಿರುಗಾಳಿ ಹೊಡೆತಕ್ಕೆ ಮರಗಳು ಧರೆಗುರುಳಿವೆ. ದೊಡ್ಡಮಗ್ಗೆ ಗ್ರಾಮದಲ್ಲಿ ಮರದಡಿ ನಿಂತಿದ್ದ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಗ್ಲಾಸ್ ಒಡೆದು ಹಾನಿಗೀಡಾಗಿದೆ. ವಾಸದ ಮನೆಗಳು ಹಾಗೂ ಅಂಗಡಿ ಮಳಿಗೆಗಳು, ಬಿಜಿಎಸ್ ಸಮುದಾಯ ಭವನದ ಛಾವಣಿ ಹಾರಿಹೋಗಿದ್ದು ಅಪಾರ ಹಾನಿ ಉಂಟಾಗಿದೆ.
ಮಲ್ಲಿಪಟ್ಟಣ ಹೋಬಳಿಯ ಚೌರಗಲ್ ಗ್ರಾಮದ ಬಳಿ ಅರಕಲಗೂಡು ಮಾರ್ಗದ ರಸ್ತೆಗೆ ಅಡ್ಡಲಾಗಿ ಬಿರುಗಾಳಿ ಅಬ್ಬರಕ್ಕೆ ಸಿಲುಕಿ ಬೃಹತ್ ಮರದ ಕೊಂಬೆ ಮುರಿದು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.