ಅಲೆಮಾರಿ ಕುರಿಗಾಹಿಗಳನ್ನು ಉದ್ದೇಶಿಸಿ ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಐಶ್ವರ್ಯ ಮಾತನಾಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ ಇತರರು ಇದ್ದರು. 
ಹಾಸನ

ಕುರಿಗಾಹಿಗಳಿಗೆ ಆರೋಗ್ಯ ರಕ್ಷಣೆ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • Health care
ಗಂಡಸಿ: ತಾಪಮಾನದಲ್ಲಿ ಏರಿಕೆಯಾಗಿದ್ದು, ಈ ವೇಳೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಐಶ್ವರ್ಯ ತಿಳಿಸಿದರು.
ಹೋಬಳಿಯ ಲಾಳನಕೆರೆ, ಹೆಗ್ಗಟ್ಟ, ಕೊಂಡೆನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶಿರಾ, ತುಮಕೂರು, ಚಳ್ಳಕೆರೆ, ಪಾವಗಡ, ಹಿರಿಯೂರು ಭಾಗದ ಕುರಿಗಾಹಿಗಳು ಆಗಮಿಸಿದ್ದು, ಅವರಿಗೆ ಬಿಸಿಲಿನ ಬೇಗೆಯಿಂದ ಪಾರಾಗುವ ಬಗ್ಗೆ ಸೋಮವಾರ ಜಾಗೃತಿ ಮೂಡಿಸಿದರು.
ಬೆಳಗ್ಗೆಯಿಂದ ಸಂಜೆವರೆಗೂ ಕುರಿಗಳನ್ನು ಕಾಯುತ್ತಾ ಹೆಚ್ಚಾಗಿ ಬಿಸಿಲಿನಲ್ಲಿಯೇ ಇರಬೇಕಾಗುತ್ತದೆ. ಈ ವೇಳೆ ಹೆಚ್ಚಾಗಿ ನೀರು ಕುಡಿಯಿರಿ, ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಹಣ್ಣು, ಎಳನೀರು, ಮಜ್ಜಿಗೆ, ನಿಂಬೆ ಪಾನೀಯ ಮತ್ತು ಸೊಪ್ಪು ತರಕಾರಿ ಪದಾರ್ಥಗಳನ್ನು ಹೆಚ್ಚಾಗಿ ಬಳಸಿ. ಹಗುರವಾದ ಸಡಿಲವಾದ ಹತ್ತಿ ಬಟ್ಟೆಯ ಉಡುಪು ಧರಿಸಿ, ಛತ್ರಿ, ಟೋಪಿ, ಕನ್ನಡಕ ಬಳಸಿ. ಕಾಫಿ, ಟೀ, ಮದ್ಯಪಾನ, ಸಕ್ಕರೆ ಅಂಶವಿರುವ ಪಾನೀಯಗಳನ್ನು ಮಿತಿಯಾಗಿ ಬಳಸಿ. ತಲೆಸುತ್ತು, ವಾಕರಿಕೆ, ಅತಿಯಾದ ಬೆವರು, ಅಥವಾ ಸ್ನಾಯು ಸೆಳೆತ ಕಂಡು ಬಂದಲ್ಲಿ ತಕ್ಷಣವೇ ಸಮೀಪದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿದರು.