- *ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಹೇಳಿಕೆ
ಸಕಲೇಶಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೆಲಸ ಎಲ್ಲರ ನೆನಪಿನಲ್ಲಿ ಸದಾ ಕಾಲ ಉಳಿಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 94ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದ ಬಳಿಕ ಸಕಲೇಶಪುರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿ, ಹಾಸನದ ಹೆಮ್ಮೆಯ ಪುತ್ರನಿಗೆ ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಬೇಕು ಎಂದು ತಿಳಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಯಾದ್ಗಾರ್ ಇಬ್ರಾಹಿಂ ಮಾತನಾಡಿ, ಕರ್ನಾಟಕವನ್ನು ಭಾರತದ ಭೂಪಟದಲ್ಲಿ ಗುರುತಿಸುವ ಮೂಲಕ ಹೆಮ್ಮೆಯ ಮಗನಾಗಿದ್ದಾರೆ ಎಂದರು.
ಪುರಸಭಾ ಮಾಜಿ ಸದಸ್ಯ ಪ್ರಜ್ವಲ್, ಜೆಡಿಎಸ್ ಮುಖಂಡ ಸಚಿನ್ ಪ್ರಸಾದ್ ಮಾತನಾಡಿದರು. ಸ್ಥಳೀಯ ಮುಖಂಡರಾದ ಭಾಸ್ಕರ್ , ಸಚಿನ್ ಪ್ರಸಾದ್ ಬೈಕೆರೆ, ಪುರಸಭೆ ಮಾಜಿ ಅಧ್ಯಕ್ಷರಾದ ಜ್ಯೋತಿ ರಾಜಕುಮಾರ್, ಅಸ್ಲಾಂ, ಸತೀಶ್, ಮಲ್ನಾಡ್ ಜಾಕಿರ್, ಮಾಜಿ ಸದಸ್ಯರಾದ ಪ್ರಜ್ವಲ್, ಗಿರೀಶ್, ಬಿ.ಬಿ.ಮಂಜುನಾಥ್ ಬೈಕೆರೆ, ಉದಯ್ ಇತರರಿದ್ದರು.