ಎರಡು ದಿನಗಳ ಸಮ್ಮಿಲನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಅರಕಲಗೂಡು ಶಾಸಕ ಎ.ಮಂಜು. ಎಸ್ಪಿ ಶುಭಾನ್ವಿತಾ ಮೊದಲಾದವರು ಚಾಲನೆ ನೀಡಿ ಶುಭ ಕೋರಿದರು. 
ಹಾಸನ

ಸಮ್ಮಿಲನ ಸೌಹಾರ್ದ ಕ್ರಿಕೆಟ್ ಪಂದ್ಯಕ್ಕೆ ಚಾಲನೆ

ಹಾಸನ: ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಮ್ಮಿಲನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ದೊರೆಯಿತು.
ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಅರಕಲಗೂಡು ಶಾಸಕ ಎ.ಮಂಜು. ಎಸ್ಪಿ ಶುಭಾನ್ವಿತಾ ಮೊದಲಾದವರು ಶುಭ ಕೋರಿದರು.
ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು, ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ನೌಕರರು ಒಟ್ಟಾಗಿ ಕಲೆತು ಕ್ರಿಕೆಟ್ ಪಂದ್ಯಾವಳಿ ಆಡುವುದು ಈಗಿನ ಕಾರ್ಯ ಒತ್ತಡದ ಸಂದರ್ಭದಲ್ಲಿ ಉತ್ತಮ ಬೆಳವಣಿಗೆ, ಇದು ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು, ಆರೋಗ್ಯಕರ ಮನೋಭಾವ ಹಾಗೂ ಉತ್ತಮ ಬಾಂಧವ್ಯ ನಿರ್ಮಾಣಕ್ಕೆ ಕ್ರೀಡೆ ಅತ್ಯುತ್ತಮ ವೇದಿಕೆಯಾಗಿದ್ದು, ಪತ್ರಕರ್ತರ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸೌಹಾರ್ದ ಕ್ರಿಕೆಟ್ ಸಮ್ಮಿಲನ ಉತ್ತಮ ನಡವಳಿಕೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ಮಾತನಾಡಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ.ಎಸ್.ಪ್ರಮೋದ್, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ, ಜಿ.ಪ್ರಕಾಶ್, ಮಾಜಿ ಅಧ್ಯಕ್ಷರಾದ ಬಾಳ್ಳುಗೋಪಾಲ್, ಬಿ.ಆರ್.ಉದಯಕುಮಾರ್, ಎಸ್.ಆರ್.ಪ್ರಸನ್ನಕುಮಾರ್, ಲೀಲಾವತಿ, ರವಿನಾಕಲಗೂಡು, ಅತೀಖ್ ಉರ್ ರೆಹಮಾನ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಕಾರ್ಯದರ್ಶಿಗಳಾದ ಖುಶ್ವಂತ್, ಕೆ.ಎಂ.ಹರೀಶ್, ಖಜಾಂಚಿ ಪ್ರಕಾಶ್ ಬೆಳವಾಡಿ, ವಿವಿಸಿ ಟಿವಿ ಸಂಪಾದಕ ಜಗದೀಶ್ ಚೌಡುವಳ್ಳಿ, ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.