ಹಿಂದೂ ಸಮಾಜೋತ್ಸವ ಇಂದು 
ಹಾಸನ

ಹಿಂದೂ ಸಮಾಜೋತ್ಸವ ಇಂದು

ಅರಸೀಕೆರೆ: ನಗರದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ಜ.25ರಂದು ಸಂಜೆ 5 ಗಂಟೆಗೆ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಮನು ಹೇಳಿದರು. ಪ್ರವಾಸಿ ಮಂದಿರದ ಆವರದ ಬಳಿಯಿರುವ ಗಣಪತಿದೇಗುಲದ ಮುಂಭಾಗ ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ.
ಹಿಂದೂ ಸಮಾಜದ ಜಾಗೃತಿಗಾಗಿ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಶ್ವಧರ್ಮ ಪೀಠ ಚಿಕ್ಕಮಗಳೂರು ತಪೋವನದ ಶ್ರೀ ಜಯಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜ.26 ಅಗ್ಗುಂದ, 27 ಜಾವಗಲ್ , ಜ.31ರಂದು ಹಾರನಹಳ್ಳಿ ಹಾಗೂ ಬಾಣಾವರ ಗ್ರಾಮದಲ್ಲಿಯೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಘಟಕದ ಸಹ ಸಂಚಾಲಕಿ ಸುಧಾ ಕಲ್ಯಾಣ ಮಾತನಾಡಿ,ಬಾಂಗ್ಲಾ ಸೇರಿದಂತೆ ಕೆಲ ದೇಶಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹೋರಾಟ ನಡೆಯುತ್ತಿದೆ. ಹಿಂದುಗಳು ಜಾಗೃತರಾಗಬೇಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೇಳಿಕೊಂಡರು. ಸಂಪತ್ ಕುಮಾರ್, ಕೃಷ್ಣ, ಶ್ವೇತಾ ಮೋಹನ್, ಉಪಸ್ಥಿತರಿದ್ದರು.