ಪುಸ್ತಕ ಬಿಡುಗಡೆ 
ಹಾಸನ

ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು? ಪುಸ್ತಕ ಬಿಡುಗಡೆ

ಲೋಕೇಶ್ ಮನು. ಡಿ
ಸಕಲೇಶಪುರ : ನೀ ಇಲ್ಲದ ಜಗತ್ತು ಎಂಬ ಪ್ರಶ್ನೆ ಪ್ರತಿಯೊಬ್ಬರೂ ತಮ್ಮೊಳಗೆ ಕೇಳಿಕೊಳ್ಳಬೇಕು ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ಅಭಿಪ್ರಾಯಪಟ್ಟರು.
ಇಲ್ಲಿನ ಲಯನ್ಸ್ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಮಲ್ನಾಡ್ ಮೆಹಬೂಬ್ ಅವರ ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು? ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸಾಮಾಜಿಕ ಜವಾಬ್ದಾರಿಯೊಂದಿಗೆ ಪತ್ರಿಕೋದ್ಯಮ ನಡೆಸುತ್ತಿರುವ ಮಲ್ನಾಡ್ ಮೆಹಬೂಬ್ ಅವರಂತಹ ಬರಹಗಾರರು ಸಮಾಜದ ದಿಕ್ಕು ತೋರಿಸುವ ದೀಪಗಳಾಗಿದ್ದಾರೆ. ನಮ್ಮ ತಾಲೂಕಿನಲ್ಲಿ ಸಾಹಿತ್ಯ ಕೃಷಿ ಕಡಿಮೆ. ಇಂಥ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಷಯ. ನಾನು ಹೀಗಿದ್ದರೆ ಹೇಗಿರುತಿತ್ತು ಎಂಬ ಕಲ್ಪನಾ ಲೋಕದ ಸಿದ್ಧಾಂತದ ಪ್ರಪಂಚಕ್ಕೆ ಮಲ್ನಾಡ್ ಮೆಹಬೂಬ್ ಅವರ ನೀ ಇಲ್ಲದ ಜಗತ್ತು ಹೇಗಿರುತಿತ್ತು ಪಸ್ತಕ ಸೇರ್ಪಡೆಯಾಗಿದೆ ಎಂದರು.
ಈ ಪಸ್ತಕವನ್ನು ಓದಿದ ಮೇಲೆ ನನಗನ್ನಿಸಿದ್ದು ಅವರು ಪ್ರಬುದ್ಧರಾಗಿದ್ದಾರೆ ಎಂಬುದಕ್ಕೆ ಸಂಕೇತವಾಗಿದೆ. ಈ ರೀತಿಯ ಬರವಣಿಗೆಯ ಪುಸ್ತಕ ಇದುವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಬಂದಿಲ್ಲ. ಇದರ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದು ಅಭಿಪ್ರಾಯಿಸಿದರು.
ಡ್ರಗ್ಸ್‌ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಂ.ವಿಶ್ವನಾಥ್ ಮಾತನಾಡಿ, ಇಂದು ಸಮಾಜವನ್ನು ಪ್ರಶ್ನಿಸುವ, ಚಿಂತನೆಗೆ ಒತ್ತುವ ನೀಡುವ ಸಾಹಿತ್ಯ ಅಗತ್ಯವಾಗಿದೆ. ಮಲ್ನಾಡ್ ಮೆಹಬೂಬ್ ಅವರ ಬರಹಗಳು ಸಮಾಜವನ್ನು ಎಚ್ಚರಿಸುವ ಶಕ್ತಿಯನ್ನು ಹೊಂದಿವೆ. ಮೆಹಬೂಬ್ ಅವರು ಹೋರಾಟಕ್ಕೆ ಜೀವಂತಿಕೆ ಕೊಟ್ಟವರು. ಅವರ ತಂದೆ ಒಳ್ಳೆಯ ನಾಯಕರಾಗಿದ್ದವರು. ಅವರಲ್ಲಿನ ಹಲವು ಗುಣಗಳು ಬಳುವಳಿಯಾಗಿ ಬಂದಿದೆ. ಪುಸ್ತಕವನ್ನು ಹಣ ಕೊಟ್ಟು ಓದಿದರೆ ಮಾತ್ರ ಲೇಖಕರಿಗೆ ಖುಷಿಯಾಗುತ್ತದೆ. ಮತ್ತು ನಾವು ಅವರಿಗೆ ಸಲ್ಲಿಸುವ ಗೌರವ ಕೂಡ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಜೈ ಮಾರುತಿ ದೇವರಾಜ್, ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್, ಹೆತ್ತೂರು ನಾಗರಾಜ್, ತೌಪೀಕ್ ಅಹಮದ್, ಶಾರದಾ ಗುರುಮೂರ್ತಿ, ಜೈ ಭೀಮ್ ಮಂಜು, ಯೆಡೇಹಳ್ಳಿ ಆರ್. ಮಂಜುನಾಥ್ ಇತರರು ಇದ್ದರು.