ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 42 ರೈತರಿಗೆ 15 ಲಕ್ಷ ರೂ.ಗಳ ಚೆಕ್ಕನ್ನು ಶಾಸಕ ಸಿ.ಎನ್.ಬಾಲಕೃಷ್ಣ ವಿತರಿಸಿದರು. ಎನ್.ಆರ್.ನಟರಾಜ್, ಡಿ.ವಿನಯ್, ವಿಕ್ಟರ್, ನಾಗರಾಜು, ಪಟೇಲ್ ಕುಮಾರ್, ಸಂಪತ್ ಕುಮಾರ್, ರಂಗಸ್ವಾಮಿ, ಇದ್ದರು.
ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2,214 ರೈತರಿಗೆ 15.50 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ನುಗ್ಗೇಹಳ್ಳಿ ಸಹಕಾರ ಸಂಘದಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 42 ಹೊಸ ರೈತರಿಗೆ 15 ಲಕ್ಷ ರೂ. ಸಾಲದ ಚೆಕ್ ವಿತರಿಸಿ ಮಾತನಾಡಿದರು. ಹೇಮಾವತಿ ಸಕ್ಕರೆ ಕಾರ್ಖಾನೆಯ ಸಹಕಾರ ಸಂಘದಲ್ಲಿ 35 ಕೋಟಿ ರೂ. ಠೇವಣಿ ಇಡಲಾಗಿದೆ. ತಾಲೂಕಿನ ತೋಟಿ ನೀರಾವರಿ ಯೋಜನೆಗೆ ಸರ್ಕಾರದಿಂದ 18 ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ. ತೋಟಿ ಏತ ನೀರಾವರಿ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಿ ಅಂತರ್ಜಲ ವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಡಿ.ವಿನಯ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಕ್ಟರ್, ಉಪಾಧ್ಯಕ್ಷ ಚಂದ್ರು, ಮುಖಂಡರಾದ ತೋಟಿ ನಾಗರಾಜ್, ಬಿ.ಆರ್.ದೊರೆಸ್ವಾಮಿ, ಎನ್.ಡಿ.ಶಿವಪ್ಪ, ಸಂಪತ್ ಕುಮಾರ್, ಎನ್.ಡಿ.ಶಂಕರ್, ರಂಗಸ್ವಾಮಿ, ಎನ್.ಆರ್.ಶಿವಕುಮಾರ್, ತೋಪೇಗೌಡ, ಹೊನ್ನೇಗೌಡ, ಕೊಪ್ಪಲು ಮಂಜುನಾಥ ಸ್ವಾಮಿ, ಎನ್.ಆರ್.ಮುರಳಿ, ಜೆ.ಡಿ.ಶಂಕರ್, ನವೀನ್ ಕುಮಾರ್, ಮಧು, ಛಾಯ ಗುರು, ದಿಲೀಪ್, ಕೋಮಲಾ, ಗುಂಡಣ್ಣ, ಕುಮಾರಸ್ವಾಮಿ, ಪಟೇಲ್ ಕುಮಾರಸ್ವಾಮಿ, ಎನ್.ಎನ್.ಮಹೇಶ್, ಪ್ರಕಾಶ್, ಚಂದ್ರು, ಮಂಗಳಮ್ಮ, ಕುಮಾರಿ, ನಂಜುಂಡೇಗೌಡ ಇತರರು ಹಾಜರಿದ್ದರು.