ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. 
ಹಾಸನ

ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಸಂಭ್ರಮ

ಲೋಕೇಶ್ ಮನು. ಡಿ
ಹೊಳೆನರಸೀಪುರ: ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಜಯಚಾಮರಾಜೇಂದ್ರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಮಹಾತ್ಮರ ಪ್ರತಿಮೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಮಾತನಾಡಿ, ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ಕೊಟ್ಟಂತಹ ಭರವಸೆಯನ್ನು ಈಡೇರಿಸುವುದರ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ನೇರವಾಗಿ ದೊರಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಪ್ರತಿ ತಿಂಗಳು, ಪ್ರತಿ ಕುಟುಂಬಕ್ಕೆ ಕನಿಷ್ಠ ನಾಲ್ಕರಿಂದ ಐದು ಸಾವಿರ ರೂ. ಸವಲತ್ತು ದೊರೆಯುವಂತೆ ಮಾಡಿದ್ದಾರೆ. ಇವರಿಗೆ ಬೆಂಬಲವಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅವರ ಸಚಿವ ಸಂಪುಟಕ್ಕೆ ರಾಜ್ಯದ ಜನರು ಸದಾ ಋಣಿಯಾಗಿರಬೇಕು ಎಂದರು.
ಮುಂಬರುವ ಪ್ರತಿ ಚುನಾವಣೆಗಳಲ್ಲೂ ಗ್ಯಾರಂಟಿ ಯೋಜನೆಗಳು ನಮ್ಮ ಪ್ರಚಾರದ ಪ್ರಮುಖ ಅಸ್ತ್ರವಾಗಲಿವೆ. ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾಳಜಿ ವಹಿಸಬೇಕಿದೆ ಎಂದರು.
ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಮಂಜುಳಾ, ಡಾ.ಸೆಲ್ವಕುಮಾರ್, ಡಾ.ಕುಸುಮ, ಡಾ.ಪ್ರೀತಿ, ಡಾ.ಸತ್ಯಪ್ರಕಾಶ್, ಮುಖಂಡರಾದ ಎಚ್.ವಿ.ಪುಟ್ಟರಾಜು, ರವಿಕುಮಾರ್, ಸುದರ್ಶನ ಬಾಬು, ಶಿವಕುಮಾರ್, ಪ್ರಸನ್ನ ಕುಮಾರ್, ಗೋವಿಂದರಾಜು, ಧರ್ಮೇಗೌಡ, ಯೋಗಣ್ಣ, ಎಂ.ಎಸ್.ಮಂಜೇಗೌಡ, ಉಮೇಶ್ ಲಕ್ಕೇಗೌಡ, ಎಚ್.ಎನ್.ರಾಘವೇಂದ್ರ, ಕೆ.ಕೆ.ಲೋಕೇಶ್, ಬಾಬರ್, ಮುಜಾಹಿದ್ ಪಾಷಾ, ಮದಥಲಿ, ಗಂಗಾಧರಚಾರಿ, ಬಿಟ್ಟ ಗೌಡನಹಳ್ಳಿ ನಾಗರಾಜ, ಹರಿಹರಪುರ ಮಹೇಶ, ಜಿಷನ್ ಅಲಿ, ಲಲಿತಾ, ಕೇಶವಮೂರ್ತಿ, ಕಿಟ್ಟಿ, ಚಂದು, ಸೋಮೇಗೌಡ, ಬೈರಶೆಟ್ಟಿ, ಜಗನ್ ಇದ್ದರು.