ಅರಕಲಗೂಡು ತಾಲೂಕಿನ ಕೊಣನೂರಿನ ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಗ್ರಾಪಂ ಅಧ್ಯಕ್ಷ ನಾಗರಾಜು ಉಧ್ಘಾಟಿಸಿದರು. ಶ್ರೀಧರ್, ಅಬೂಬಕರ್, ರವಿಕುಮಾರ್, ಸುಬ್ರಹ್ಮಣ್ಯ ಇತರರಿದ್ದರು. 
ಹಾಸನ

ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸುವುದು ಅವಶ್ಯ

ಲೋಕೇಶ್ ಮನು. ಡಿ
ಅರಕಲಗೂಡು: ಇಂದಿನ ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸುವುದು ಅಷ್ಟೇ ಮುಖ್ಯವಾಗಿದೆ ಎಂದು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಎಚ್.ಎಲ್.ರಾಜೇಶ್ವರಿ ತಿಳಿಸಿದರು.
ಪಟ್ಟಣದ ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಕೇಳುವುದಕ್ಕಿಂತ ಮೊದಲೆ ವಿವಿಧ ವಸ್ತುಗಳನ್ನು ಕೊಡಿಸುವ ಪಾಲಕರು ಅವರಲ್ಲಿ ಜವಾಬ್ದಾರಿ ಮತ್ತು ವಸ್ತುಗಳ ಬೆಲೆ ಅರಿಯಲು ಅವಕಾಶ ಮಾಡಿಕೊಡವಲ್ಲಿ ವಿಫಲರಾಗುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅನಿರೀಕ್ಷಿತವಾಗಿ ಶಾಲಾ ವಿದ್ಯಾರ್ಥಿಗಳನ್ನೂ ತಲುಪಿದ ಮೊಬೈಲ್ ಮಕ್ಕಳಿಗೆ ಅಗತ್ಯಕ್ಕಿಂತ ಅನಗತ್ಯ ವಿಷಯಗಳನ್ನು ಕಲಿಸುತ್ತಿರುವುದು ಅಘಾತಕಾರಿ ವಿಷಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಅಂಗ್ಲಮಾಧ್ಯಮ ಶಿಕ್ಷಣ ನೀಡುತ್ತಿರುವ ಕೊಣನೂರಿನ ಲಯನ್ಸ್ ಶಾಲೆಯು ಈ ಭಾಗದಲ್ಲಿ ಅನೇಕರಿಗೆ ವೈದ್ಯರು ಮತ್ತು ಇಂಜಿನಿಯರ್‌ಗಳು ಸೇರಿದಂತೆ ಪ್ರತಿಷ್ಠಿತ ವೃತ್ತಿಗಳಿಸಲು ಅವಕಾಶ ಮಾಡಿಕೊಡುವಲ್ಲಿ ಮಂಚೂಣಿಯಲ್ಲಿದೆ ಎಂದರು.
ವಾರ್ಷಿಕೋತ್ಸವದ ನಿಮಿತ್ತ ನಡೆಸಿದ ಕ್ರೀಡಾ, ಸಾಹಿತ್ಯಕ ಮತ್ತು ಪಠ್ಯಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳಿಸಿದ ಹಾಗೂ ವಿಷಯಗಳಲ್ಲಿ 100 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಲಯನ್ಸ್ ಕ್ಲಬ್ ಅದ್ಯಕ್ಷ ಕೆ.ಎ. ಶ್ರೀಧರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಬೂಬಕರ್, ಕಾರ್ಯದರ್ಶಿ ರವಿಕಮಾರ್, ಖಜಾಂಚಿ ಸುಬ್ರಮಣ್ಯ, ಗ್ರಾ.ಪಂ ಉಪಾಧ್ಯಕ್ಷೆ ಪಾವನಾ ಸತೀಶ್ ಇದ್ದರು. ಶಾಲಾ ಆಡಲಿತ ಮಂಡಳಿ ಸದಸ್ಯರು, ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು, ಮಖ್ಯಶಿಕ್ಷಕಿಯರು, ಪಾಲಕರು ಮತ್ತು ವಿದ್ಯಾರ್ಥಿಗಳಿದ್ದರು.
ಸಮಾರಂಭದ ನಂತರ ಶಾಲಾ ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಐತಿಹಾಸಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರದಿದ್ದ ಸಭಿಕರ ಮತ್ತು ಪಾಲಕರ ಗಮನ ಸೆಳೆದವು.