ಅರಸೀಕೆರೆ ತಾಲೂಕಿನ ಡಿ.ಎಂ.ಕುರ್ಕೆಯಲ್ಲಿ ಆಯೋಜಿಸಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಶಾಸಕ ಶಿವಲಿಂಗೇಗೌಡ ತರಾಟೆ ತೆಗೆದುಕೊಂಡದರು.
ಅರಸೀಕೆರೆ ಗ್ರಾಮಾಂತರ: ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಎಷ್ಟು ಅನುದಾನ ಬರುತ್ತದೆ ಎಂಬ ಪ್ರಶ್ನೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಸಮರ್ಪಕ ಉತ್ತರ ನೀಡಿದ್ದರಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡ ಗರಂ ಆದರು.
ಅರಸೀಕೆರೆ ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಣೆಯ ನಂತರ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ನಡೆಯಿತು.
ಈ ವೇಳೆ ಸ್ಥಳೀಯರು ಮನೆ ಇಲ್ಲದ ವಿಷಯವನ್ನು ಶಾಸಕರ ಗಮನಕ್ಕೆ ತಂದರು.
ಸಭೆಯ ವೇಳೆ ಪಿಡಿಒ ವೇದಾವತಿ ನೀಡಿದ ಅಸ್ಪಷ್ಟ ಉತ್ತರಕ್ಕೆ ಕಿಡಿಕಾರಿದ ಶಾಸಕರು, ಅನುದಾನದ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ತಪ್ಪು ಮಾಹಿತಿ ನೀಡುವುದು ಯೋಗ್ಯವಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ನಾನು ಮರ್ಯಾದೆಯಿಂದ ಹೇಳಿದ್ದೇನೆ. ಕೆಲಸಕ್ಕೆ ಹೊಣೆಗಾರಿಕೆ ಬೇಕು. ಸುಮ್ಮನೆ ಅಡ್ಡಾಡಿ ಮನೆಗೆ ಹೋಗುವುದಲ್ಲ, ಸ್ವಲ್ಪ ಗೌರವದಿಂದ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.