ಅರಕಲಗೂಡು ತಾಲೂಕಿನ ಗೊಬ್ಬಳಿ ಕಾವಲು ಗ್ರಾಮದಲ್ಲಿ ಶನಿವಾರ ಹನುಮದ್ ವ್ರತಾಚರಣೆ ವಿಜೃಂಭಣೆಯಿಂದ ಜರುಗಿತು. 
ಹಾಸನ

ಗೊಬ್ಬಳಿ ಕಾವಲು ಗ್ರಾಮದಲ್ಲಿ ಹನುಮದ್ ವ್ರತಾಚರಣೆ

ಪ್ರಮುಖ ಮುಖ್ಯಾಂಶಗಳು

  • hanuma vrata
ಅರಕಲಗೂಡು: ತಾಲೂಕಿನ ಗೊಬ್ಬಳಿ ಕಾವಲು ಗ್ರಾಮದಲ್ಲಿ ಶನಿವಾರ ಹನುಮದ್ ವ್ರತವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಗೊರೂರು ಹೇಮಾವತಿ ಜಲಾಶಯದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಗೊಬ್ಬಳಿ ಕಾವಲು ಗ್ರಾಮದಲ್ಲಿ ಹನುಮದ್ ವ್ರತವನ್ನು ಗ್ರಾಮಸ್ಥರು ಹಬ್ಬದ ರೀತಿ ಆಚರಿಸಿದ್ದು ವಿಶೇಷವಾಗಿತ್ತು. ಕಾವೇರಿ ನದಿಯಿಂದ ತಂದ ಕಳಸವನ್ನು ಮೆರವಣಿಗೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಬಳಿಕ ಅಲಂಕೃತ ಪಲ್ಲಕ್ಕಿಯಲ್ಲಿ ಹನುಮ ದೇವರನ್ನು ಪ್ರತಿಷ್ಠಾಪಿಸಿ ವೈಭವೋಪೇತ ಮೆರವಣಿಗೆ ಮಾಡಲಾಯಿತು. ಉತ್ಸವದ ವೇಳೆ ಭಕ್ತರು ಪೂಜೆ ಸಲ್ಲಿಸಿ ಪುನೀತರಾದರು. ಮಕ್ಕಳು, ಯುವಕರು ಹನುಮವೇಷ ಧರಿಸಿ ಕುಣಿದು ಸಂಭ್ರಮಿಸಿದರು. ಅನ್ನ ಸಂತರ್ಪಣೆ ನಡೆಯಿತು.