- ಸಾಯಿ ಸದ್ಗುರು ಆಶ್ರಮದ ಮುಖ್ಯಸ್ಥ ಗುರುಮೂರ್ತಿ ಗುರೂಜಿ ಮಾಹಿತಿ
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿ ಇರುವ ಸಾಯಿಸದ್ಗುರು ಆಶ್ರಮದಲ್ಲಿ ಪ್ರತಿವರ್ಷದಂತೆ ಆಷಾಢ ಮಾಸದಲ್ಲಿ ಆಯೋಜಿಸಲಾಗುವ 11ನೇ ವರ್ಷದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಜು. 29ಕ್ಕೆ ಏರ್ಪಡಿಸಲಾಗಿದೆ ಎಂದು ಸಾಯಿ ಸದ್ಗುರು ಆಶ್ರಮದ ಮುಖ್ಯಸ್ಥ ಗುರುಮೂರ್ತಿ ಗುರೂಜಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 29 ರಂದು ಗುರುಪೂರ್ಣಿಮಾ ಪ್ರಯುಕ್ತ ಬೆಳಗ್ಗೆ 8:30ಕ್ಕೆ ವ್ಯಾಸ ಪೂಜೆ,8:45ಕ್ಕೆ ಸದ್ಗುರು ಪೂಜೆ, 9:00 ಗಂಗಾಪೂಜೆ, ರಿಕ್ಷಾವಂದನೆ ಮತ್ತು ಆಶೀರ್ವಚನ, ಕುಂಭಾಭಿಷೇಕ ಗಣಪತಿ ಹೋಮ, ಶಿರಡಿ ದೇವಾಲಯದ ಮಾದರಿಯಲ್ಲೇ ನಾಲ್ಕು ಆರತಿ ಮತ್ತು ಸಾಯಿಬಾಬಾ ಅವರ ಪಾದಸ್ಪರ್ಶ ಮತ್ತು ಭಜನೆ ಸೇರಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆಯಿಂದ ಸಂಜೆ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮಧ್ಯಾಹ್ನ ಪ್ರಸಾದದ ವಿನಿಯೋಗದ ವ್ಯವಸ್ಥೆ ಇದೆ. ಎಂದು ಹೇಳಿದರು.