ಕೋಗಿಲಮನೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಶೇಷಪ್ಪ, ಸಂತೋಷ್, ಜಗದೀಶ್, ಹರೀಶ್, ಶಶಿ, ರೇಣುಕಣ್ಣ, ಹೂವೇಗೌಡ ಇತರರಿದ್ದರು.  
ಹಾಸನ

ಜನರ ಆಶಯದಂತೆ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು

ಬೇಲೂರು: ತಾಲೂಕಿನ ಕೋಗಿಲೆ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡ್ಲಗೆರೆ, ಕೊತ್ತನಹಳ್ಳಿ, ಕೋಗಿಲಮನೆ ಗ್ರಾಮಗಳ ರಸ್ತೆ ಹಾಗೂ ಕೋಗಿಲಮನೆ ಗ್ರಾಮದಲ್ಲಿರುವ ದೇವಿರಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಕೋಗಿಲಮನೆ, ಕೊತ್ತನಹಳ್ಳಿ ಹಾಗೂ ಹಾಡ್ಲಗೆರೆ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಪ್ರಮುಖವಾಗಿ ರಸ್ತೆಗಳು ಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ರಸ್ತೆ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ. ಈ ಭಾಗದಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ ಕಾಮಗಾರಿಗೆ ಅನುದಾನ ತಂದು ಕೋಗಿಲೆ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡ್ಲಗೆರೆ, ಕೊತ್ತನಹಳ್ಳಿ, ಕೋಗಿಲಮನೆ ಗ್ರಾಮಗಳ ರಸ್ತೆ ಹಾಗೂ ಕೋಗಿಲಮನೆ ಗ್ರಾಮದಲ್ಲಿರುವ ದೇವಿರಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಯಕಲ್ಪ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗುವುದು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಗ್ರಾಮಸ್ಥರು ಕೆಲಸ ಮಾಡುವ ಸಂದರ್ಬ ನಿಂತು ಸಹಕಾರ ನೀಡಿ ಉತ್ತಮ ರಸ್ತೆ ನಿರ್ಮಿಸಲು ಮುಂದಾಗಬೇಕು ಎಂದರು.
ಕೋಗಿಲಮನೆ ಗ್ರಾಪಂ ಮಾಜಿ ಅಧ್ಯಕ್ಷ ಶೇಷಪ್ಪ, ಸ್ಥಳೀಯ ಮುಖಂಡರಾದ ಸಂತೋಷ್, ಜಗದೀಶ್, ಹರೀಶ್, ಶಶಿ, ರೇಣುಕಣ್ಣ, ಹೂವೇಗೌಡ ಇತರರಿದ್ದರು.