ತಗಡೂರು, ಲಕ್ಕರಸನಹಳ್ಳಿ ಗ್ರಾಮಗಳ ಕೆರೆಗಳು ತುಂಬಿ ಹರಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಟಿ.ವಿ.ಶಿವಾನಂದ ತಗಡೂರು, ಬಸವರಾಜ್, ಯೋಗೇಶ್, ಕೆ.ಪಿ.ಕುಮಾರ್, ತೋಂಟ ಆರಾಧ್ಯ, ಕಾಂತರಾಜ್, ಗಿರೀಶ್, ಪುಟ್ಟರಾಜು, ಟಿ.ಸಿ.ಮಂಜುನಾಥ್ ಇದ್ದರು.
- ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ
- ದೊಡ್ಡಕೆರೆ ಚಿಕ್ಕೆಕೆರೆಗಳಿಗೆ ಬಾಗಿನ ಅರ್ಪಣೆ
ನುಗ್ಗೇಹಳ್ಳಿ: ಭುವನಹಳ್ಳಿಯ ವಡ್ಡರಹಟ್ಟಿ, ಸಿದ್ದರಹಟ್ಟಿ ಗ್ರಾಮಗಳ ಮಾರ್ಗದ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ ನೀಡಿದರು.
ಹೋಬಳಿಯ ತಗಡೂರು ಲಕ್ಕರಸನಹಳ್ಳಿ ಗ್ರಾಮಗಳ ದೊಡ್ಡಕೆರೆ ಚಿಕ್ಕೆಕೆರೆಗಳಿಗೆ ಬುಧವಾರ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಕೆರೆಗಳ ಹಿಂಭಾಗದ ಕಲ್ಲೇಶ್ವರ ಸ್ವಾಮಿ ದೇಗುಲಕ್ಕೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಲು ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಸಹಕರಿಸಿದ್ದಾರೆ. ಕೆರೆ ಏರಿ ಹಿಂಭಾಗದಿಂದ ವಡ್ಡರಹಟ್ಟಿ ಲಿಂಗದೇವರ ಮನೆಯ ರಸ್ತೆ ತಗಡೂರು ಪರಿಶಿಷ್ಟ ಸಮಾಜದವರ ಮನೆಗಳಿಗೆ ರಸ್ತೆ ನಿರ್ಮಾಣ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಟಿ.ವಿ.ಶಿವಾನಂದ ತಗಡೂರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ಕುಮಾರ್, ಉದ್ಯಮಿ ಭುವನಹಳ್ಳಿ ಯೋಗೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕರಸನಹಳ್ಳಿ ಪುಟ್ಟರಾಜು, ಟಿ.ವಿ.ಬಸವರಾಜು, ಟಿ.ಎಸ್. ತೋಂಟ ಆರಾಧ್ಯ, ಎಲ್.ಕೆ.ಇಂದ್ರೇಶ್, ಮಹಾಲಿಂಗೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ತಮ್ಮಯ್ಯ, ಟಿ.ಎಂ.ಗಿರೀಶ್, ಎಚ್. ಪಿ.ಸಂಪತ್ ಕುಮಾರ್, ಎನ್.ಗಂಗಾಧರ್, ಕಾಂತರಾಜ್, ಟಿ.ಸಿ.ಮಂಜುನಾಥ್, ಚನ್ನಬಸವಣ್ಣ, ಹರೀಶ್, ಟಿ.ಬಿ.ಚಂದ್ರಪ್ಪ, ಚುಂಚಯ್ಯ ದೇವರಾಜ್, ಪ್ರೇಮ ಗಿರೀಶ್, ಚೈತ್ರಾ, ಗಿರಿಜಾ, ಪುಷ್ಪ , ಕುಸುಮ, ಸುವರ್ಣ ಪರಮೇಶ್, ಟಿ.ಆರ್. ಈರೇಶ್, ನೀಲಕಂಠ ಸ್ವಾಮಿ, ಬೋರ್ವೆಲ್ ಸಚಿನ್ ಇತರರು ಹಾಜರಿದ್ದರು.