ಹಾಸನ: ತಾಲೂಕಿನ ಶಂಖ ಗ್ರಾಮದಲ್ಲಿ ಹಗಲು ವೇಳೆಯೇ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ.
ದೂರುದಾರ ಪಂಚಾಕ್ಷರಿ ಅವರು ಜು.19 ರಂದು ಬೆಳಗ್ಗೆ 7 ಗಂಟೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 2.45ಕ್ಕೆ ವಾಪಸ್ ಬಂದು ನೋಡಿದಾಗ ಬೀಗ ಮುರಿದಿದ್ದು, ಬೀರುವಿನಲ್ಲಿದ್ದ 50 ಸಾವಿರ ನಗದು ಮತ್ತು 12 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ತನಿಖೆ ನಡೆಯುತ್ತಿದೆ.