ಬೇಲೂರು ಪಟ್ಟಣದ ಕಾವೇರಿ ಕ್ಲಿನಿಕ್ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಚಂದ್ರಮೌಳಿ, ತಾರಾಮಣಿ ಸುರೇಶ್, ಡಾ.ಗುರುಪ್ರಸಾದ್ ಬಾಣೂರು, ಡಾ.ಜಿ.ಆರ್.ಲೀಲಾ ಇದ್ದರು.
ಬೇಲೂರು: ಲಯನ್ಸ್ ಕ್ಲಬ್, ಕಾವೇರಿ ಕ್ಲಿನಿಕ್, ಕೆಆರ್‌ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಚಿಕ್ಕಮಗಳೂರು ಹಾಗೂ ಎಂಎಂಎಂ ಆಸ್ಪತ್ರೆ ಹಾಸನ ಸಂಯುಕ್ತಾಶ್ರಯದಲ್ಲಿ ಭಾನುವಾರ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನ ರಸ್ತೆಯ ಕಾವೇರಿ ಕ್ಲಿನಿಕ್ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಬೇಲೂರಿನ ಲಯನ್ಸ್ ಸಂಸ್ಥೆಯಿಂದ 14 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುತ್ತಿದ್ದೇವೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ತಾರಾಮಣಿ ಸುರೇಶ್ ಮಾತನಾಡಿ, ಸಂಸ್ಥೆಯಿಂದ ಹಲವು ಶಿಬಿರಗಳನ್ನು ಆಯೋಜಿಸುತ್ತಿದ್ದು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಾ.ಗುರುಪ್ರಸಾದ್ ಬಾಣೂರು, ಡಾ.ಎಂ.ಉಮೇಶ್, ಡಾ.ಎಸ್.ಕೆ.ಅವಿನಾಶ್, ಡಾ.ಜಿ.ಆರ್.ಲೀಲಾ, ಡಾ. ಬಿ.ಕೆ.ಮನೋಜ್ ಕುಮಾರ್, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಸಂತೋಷ್, ಖಜಾಂಚಿ ಆದರ್ಶ, ಪದಾಧಿಕಾರಿಗಳಾದ ಸುರೇಶ್, ಅಬ್ದುಲ್ ಲತೀಫ್, ಕೆ.ಎಲ್.ಸುರೇಶ್, ಮಂಜುನಾಥ್, ಹೇಮಂತ್, ಡಾ.ರೋಹನ್, ಮುಕ್ತಾರ್ ಅಹಮದ್, ಪೂವಯ್ಯ ಇತರರಿದ್ದರು.