ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿ ಸಹೋದರಿ ತಿಥಿ ಕಾರ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಗಮಿಸಿದ್ದರು. 
ಹಾಸನ

ಬಸವನಾಯಕನಹಳ್ಳಿಗೆ ಮಾಜಿ ಪ್ರಧಾನಿ ಭೇಟಿ

ನಾಗೇಶ ಎಸ್
ಹೊಳೆನರಸೀಪುರ: ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ತಮ್ಮ ಸಹೋದರಿ ಜವರಮ್ಮ ತಿಥಿ ಕಾರ್ಯಕ್ಕೆ ಭಾನುವಾರ ಬಸವನಾಯಕನಹಳ್ಳಿ ಆಗಮಿಸಿದ್ದರು.
ತಾಲೂಕು ಹಳೆಕೋಟೆ ಹೋಬಳಿಯ ಬಸವನಾಯಕನಹಳ್ಳಿ ಗ್ರಾಮದಲ್ಲಿ ಜವರಮ್ಮ ಅವರ ತಿಥಿ ಕಾರ್ಯ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡ ಅವರು ಭಾನುವಾರ ಬೆಳಗ್ಗೆ 11.10 ಗಂಟೆಗೆ ಬೆಂಗಳೂರಿನಿಂದ ಹರದನಹಳ್ಳಿ ಗ್ರಾಮಕ್ಕೆ ಹೆಲಿಕಾಪ್ಟರ್ ಮುಖಾಂತರ ಆಗಮಿಸಿದ್ದರು. ಬಳಿಕ ಹರದನಹಳ್ಳಿಯಿಂದ ಬಸವನಾಯಕನಹಳ್ಳಿ ಗ್ರಾಮಕ್ಕೆ ತೆರಳಿ, ಅಲ್ಲಿ ಕಾರ್ಯ ಮುಗಿಸಿಕೊಂಡು ವಾಪಸ್ ಹರದನಹಳ್ಳಿ ಗ್ರಾಮಕ್ಕೆ ಬಂದು ಮಧ್ಯಾಹ್ನ 1.50 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು. ಶಾಸಕ ಎಚ್.ಡಿ.ರೇವಣ್ಣ ಹಾಗೂ ಬಂಧುಗಳು ಇದ್ದರು.