ಅರಸೀಕೆರೆ ತಾಲೂಕಿನ ಜಾಜೂರು ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಜಾಥಾವನ್ನು ಕಾಲೇಜಿನ ಪ್ರಾಂಶುಪಾಲರಾದ ಗೀತಾ ಉದ್ಘಾಟಿಸಿದ್ದರು. ಓಂಕಾರ್ ಮೂರ್ತಿ, ಕುಮಾರ್, ಡಾ. ಶಿವಕುಮಾರ್, ಡಾ. ಹರೀಶ್, ಪ್ರೊ. ರಾಜಶೇಖರ್, ಮಂಜುನಾಥ್, ಪ್ರತಿಭಾ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಹೊರವಲಯದ ಜಾಜೂರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಶುಕ್ರವಾರ ಹರ್ ಘರ್ ತಿರಂಗಾ ಅಭಿಯಾನ ನಡೆಯಿತು.
ಈ ಸಂದರ್ಭ ಹಸಿರು ನಿಶಾನೆ ತೋರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ,
ನಮ್ಮ ದೇಶ ಪ್ರಪಂಚದಲ್ಲೇ ಅಗ್ರಮಾನ್ಯವಾಗಿದೆ ಎಂದರು. ಸ್ವಾತಂತ್ರೃ ದೊರೆತು 80 ವರ್ಷಗಳ ಅವಧಿಯಲ್ಲಿ ವಿಶ್ವದಲ್ಲೇ ಹಲವು ರಂಗದಲ್ಲಿ ಮೇಲುಗೈ ಸಾಧಿಸಿರುವ ನಮ್ಮ ದೇಶದ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇರಬೇಕು. ಆ. 15ರಂದು ನಾವೆಲ್ಲರೂ ನಮ್ಮ ನಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರೋತ್ಸವವನ್ನು ಆಚರಿಸಬೇಕು ಎಂದು ಹೇಳಿದರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭವಾದ ಜಾಥಾ ಜಾಜೂರು ಮಾರ್ಗವಾಗಿ ಹೊರಟು ಅರಸೀಕೆರೆ ತಾಲೂಕು ಆಡಳಿತ ಕಚೇರಿಯ ಮುಂಭಾಗದವರೆಗೂ ಸಾಗಿತು. ತಿರಂಗಾ ಯಾತ್ರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ರಾಷ್ಟ್ರ ಧ್ವಜ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನು,
ದೇಶಭಕ್ತಿ ಬಿಂಬಿಸುವ ನಾಮಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಜಾಜೂರು ಗ್ರಾಮ ಪಂಚಾಯತಿಯ ಮುಂಭಾಗ ಅಭಿಯಾನ ಆಗಮಿಸಿದ ಸಂದರ್ಭ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರೊ. ಕುಮಾರ್ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ದೇಶಭಕ್ತಿಯ ಪ್ರತೀಕಗಳಾಗಬೇಕು ಎಂದು ಅವರು ತಿಳಿಸಿದರು.
ಸಿಡಿಸಿ ಓಂಕಾರ್ ಮೂರ್ತಿ, ಪ್ರಾಧ್ಯಾಪಕರಾದ ಡಾ. ಶಿವಕುಮಾರ್, ಡಾ.ವಿಶ್ವನಾಥ್, ಡಾ. ಹರೀಶ್ ಮಂಜುನಾಥ್, ಪ್ರೊ.ರಾಜಶೇಖರ್, ಲೋಕೇಶ್, ಉಮಾಶಂಕರ್, ಡಾ. ಸುನೀಲ್ ಹರೀಶ್, ಮೋಹನ್, ವೀಣಾ, ಪ್ರತಿಭಾ ಇತರರು ಭಾಗವಹಿಸಿದ್ದರು.