ಆಲೂರು ತಾಲೂಕಿನ ಕಾರ್ಜುವಳ್ಳಿಯಲ್ಲಿರುವ ಹಿರೇಮಠದ ಹೊರನೋಟ. 
ಹಾಸನ

16ರಿಂದ ಕಾರ್ಜುವಳ್ಳಿ ಶ್ರೀ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯಲ್ಲಿ ಚಿಂತನ-ಸಂವರ್ಧನ
  • ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ 47ನೇ ವರ್ಷದ ಪುಣ್ಯ ಸ್ಮರಣೋತ್ಸವ
  • ಕಾರ್ಜುವಳ್ಳಿಯ ಹಿರೇಮಠಕ್ಕೆ ಪಂಚಪೀಠಗಳ ಮಠಾಧೀಶರ ಆಗಮನ
ಆಲೂರು: ಶ್ರೀ ರಂಭಾಪುರಿ ವೀರಸಿಂಹಾಸನ ಶಾಖೆಯ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಕಾರ್ಜುವಳ್ಳಿ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ, ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಡಿ.16ರಿಂದ 20ರವರಿಗೆ ಸಮಾಜೋಧಾರ್ಮಿಕ ಚಿಂತನ-ಸಂವರ್ಧನ ಸಮಾರಂಭ ಆಯೋಜಿಸಲಾಗಿದೆ.
ಡಿ.16ರ ಬೆಳಗ್ಗೆ 7 ಗಂಟೆಗೆ ಗಂಗಾಪೂಜೆ, ಗೋಪೂಜೆ, ಕಂಕಣಧಾರಣೆ, ಮಹಾಸಂಕಲ್ಪ, ಪುಣ್ಯಾಃ ಸ್ವಸ್ತಿವಾಚನ, ನವಗ್ರಹಯುಕ್ತ ಪ್ರಮುಖ ಕಲಶಾರಾಧನೆಗಳು, ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಮಹಾರುದ್ರಾಭಿಷೇಕ, ನವನೀಡ(ಬೆಣ್ಣೆ) ಅಲಂಕಾರ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀಮಠದ ಹಿರಿಯ ಶ್ರೀಗಳ ಸನ್ನಿಧಿಯಲ್ಲಿ ಶ್ರೀ ಇಷ್ಟನಾಗ-ಸಿದ್ದಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ.
ಡಿ.17ರ ಬೆಳಗ್ಗೆ 7 ಗಂಟೆಯಿಂದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಶ್ರೀ ಗುರು ಪಟ್ಟಾಧಿಕಾರದ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ತಪೋಕ್ಷೇತ್ರ ದುಗ್ಗಿ-ಕಡೆನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಇಷ್ಟನಾಗ-ಸಿದ್ದಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಸರ್ವಸೂಕ್ತ ಪಾರಾಯಣ ಪೂರ್ವಕ ಕ್ಷೀರಾಭಿಷೇಕ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಹಾಗೂ ಶ್ರೀ ಮಠದ ಹಿರಿಯ ಶ್ರೀಗಳ ಸನ್ನಿಧಿಯಲ್ಲಿ ರುದ್ರಾಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳ ಶ್ರೀಗುರು ಪಟ್ಟಾಧಿಕಾರದ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಶ್ರೀಗಳಿಗೆ ಹರಿದ್ರಾಲೇಪನ, ಮಹಾಭಿಷೇಕ, ರಾಜೋಪಚಾರಯುಕ್ತ ಪಾದಪೂಜೆ, ಶಿಷ್ಯ ಸದ್ಭಕ್ತರಿಂದ ಭಕ್ತಿ ಸಮರ್ಪಣೆ ಜರುಗಲಿದೆ.
ಡಿ.18ರ ಬೆಳಗ್ಗೆ 7 ಗಂಟೆಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಇಷ್ಟನಾಗ-ಸಿದ್ದಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಶ್ರೀಮಠದ ಹಿರಿಯ ಶ್ರೀಗಳವರ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಆದಿತ್ಯಹೃದಯಸ್ತೋತ್ರ ಪಾರಾಯಣ. ಲಿಂ.ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ 47ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಶ್ರೀಗಳ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ, ರುದ್ರಾಕ್ಷಿ ಕಿರೀಟ ಧಾರಣೆ, ಬಿಲ್ವಪತ್ರಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆಯುತ್ತದೆ.
ಡಿ.19ರ ಬೆಳಗ್ಗೆ 7 ಗಂಟೆಯಿಂದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳ ಜನ್ಮ ವರ್ಧಂತಿ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ಇಷ್ಟನಾಗ-ಸಿದ್ದಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಹಾಗೂ ಶ್ರೀ ಮಠದ ಹಿರಿಯ ಶ್ರೀಗಳ ಸನ್ನಿಧಿಯಲ್ಲಿ ಪರಮಾನ್ನ ಅಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾಸೂಕ್ತ ಪಾರಾಯಣ ಪೂರ್ವಕ ಕ್ಷೀರಾಭಿಷೇಕ, ಮಲ್ಲಿಕಾಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ಲಲಿತಾ ಸಹಸ್ರ ನಾಮಾವಳಿ ಪಾರಾಯಣ ಪೂರ್ವಕ ಶ್ರೀಚಕ್ರಕ್ಕೆ ಸದಸ್ಯರಿಂದ ಲಕ್ಷ ಕುಂಕುಮಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಗುವುದು.
ಡಿ.20ರ ಬೆಳಗ್ಗೆ 7 ಗಂಟೆಯಿಂದ ಶ್ರೀಮಠದ ಆವರಣದಲ್ಲಿ ಅಮೃತ ಸಂಜೀವಿನಿ ಮಹಾಮೃತ್ಯುಂಜಯ ಹೋಮ-ಪೂರ್ಣಾಹುತಿ, ರಕ್ಷಾಧಾರಣೆ, ಶ್ರೀಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಇಷ್ಟನಾಗ-ಸಿದ್ದಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಹಾಗೂ ಶ್ರೀಮಠದ ಹಿರಿಯ ಶ್ರೀಗಳ ಸನ್ನಿಧಿಯಲ್ಲಿ ಭಸ್ಮಜಲಾಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀಮಠದ ಆವರಣದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಪೂಜಾ-ವ್ರತ ಆಚರಣೆ, ವ್ರತಕಥಾ ಶ್ರವಣ, ಮಹಾನೈವೇದ್ಯ, ಮಹಾಮಂಗಳಾರತಿಗಳು ಶ್ರೀಮಠದ ಪುರೋಹಿತ ಬಳಗ ಹಾಗೂ ನಾಗರನವಿಲೆ ಶಿವಾನುಗ್ರಹ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆಯಲಿದೆ.
ಉಜ್ಜಯಿನಿ ಪೀಠದ ಶ್ರೀ
ಡಿ.16ರಂದು ಸಂಜೆ 5.30 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಉಜ್ಜಯಿನಿ ಪೀಠದ ಶ್ರೀ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ. ಶ್ರೀಮಠದಿಂದ ನೀಡುವ ಧರ್ಮ ಸೇವಾ ಕೌಸ್ತುಭ ಪ್ರಶಸ್ತಿಯನ್ನು ಕಾಫಿ ಬೆಳೆಗಾರ ತಿಪ್ಪಾಪುರ ಗ್ರಾಮದ ಗುರುಶಾಂತ ಅವರಿಗೆ ಪ್ರದಾನ ಮಾಡಲಾಗುವುದು.
ಆಂಧ್ರಪ್ರದೇಶ ಶ್ರೀಶೈಲ ಪೀಠದ ಶ್ರೀ
ಡಿ.17ರ ಸಂಜೆ 5.30 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಆಂಧ್ರಪ್ರದೇಶ ಶ್ರೀಶೈಲ ಪೀಠದ ಶ್ರೀ ಗಿರಿರಾಜ ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದು ಕಾರ್ಯಕ್ರಮದಲ್ಲಿ ಶ್ರೀಮಠದಿಂದ ನೀಡುವ ಗುರು ಸೇವಾ ಕೌಸ್ತುಭ ಪ್ರಶಸ್ತಿಯನ್ನು ಡಿ.ಜೆ. ಪ್ರವೀಣ್ ಆಲೂರು ಅವರಿಗೆ ಪ್ರದಾನ ಮಾಡಲಾಗುವುದು.
ಉತ್ತರಾಖಂಡ್ ಕೇದಾರ ಪೀಠದ ಶ್ರೀ
ಡಿ.18ರ ಸಂಜೆ 5.30 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಉತ್ತರಾಖಂಡ್ ಕೇದಾರ ಪೀಠದ ಶ್ರೀ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ರಾವಲ್ ಪದವಿ ಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದು ಆ ದಿನ ಶ್ರೀಮಠದಿಂದ ನೀಡುವ ಸಮಾಜ ಸೇವಾ ಕೌಸ್ತುಭ ಪ್ರಶಸ್ತಿಯನ್ನು ಸಮಾಜಸೇವಕ ಕಣದಹಳ್ಳಿ ಮಂಜೇಗೌಡರಿಗೆ ಪ್ರದಾನ ಮಾಡಲಾಗುವುದು.
ಉತ್ತರಪ್ರದೇಶ ಕಾಶಿ ಪೀಠದ ಶ್ರೀ
ಡಿ.19ರ ಸಂಜೆ 5.30 ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಉತ್ತರಪ್ರದೇಶ ಕಾಶಿ ಪೀಠದ ಶ್ರೀಮತ್ಥಾಥೀ ಜ್ಞಾನ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ. ಆ ದಿನ ಶ್ರೀಮಠದಿಂದ ನೀಡುವ ಧರ್ಮಹಿತ ಚಿಂತಕ ಪ್ರಶಸ್ತಿಯನ್ನು ಆಲೂರು ತಾಲೂಕು ವೀರಶೈವ ಸಂಘ ಖಜಾಂಚಿ ವೈ.ಬಿ.ಟೀಕರಾಜು ಪ್ರದಾನ ಮಾಡಲಾಗುವುದು.
ಬಾಳೆಹೊನ್ನೂರು ರಂಭಾಪುರಿ ಶ್ರೀ
ಡಿ.20ರ ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಶ್ರೀರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ. ಆ ದಿನ ಶ್ರೀಮಠದಿಂದ ನೀಡುವ ಧರ್ಮ ಸಂವರ್ಧಕ ಪ್ರಶಸ್ತಿಯನ್ನು ಬೇಲೂರು ಶಾಸಕ ಎಚ್.ಕೆ. ಸುರೇಶ್ ಅವರಿಗೆ ಪ್ರದಾನ ಮಾಡಲಾಗುವುದು.