ದೇವಲಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಎಫ್‌ಎನ್‌ಎಸ್ ಯೋಜನೆಯಡಿ ಹಲಸಂದೆ, ರಾಗಿ, ಗೊಬ್ಬರ ಇತರೆ ಪರಿಕರಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ವಿತರಿಸಿದರು. ದಿನೇಶ್, ದೊರೆಸ್ವಾಮಿ, ಸಂಪತ್ ಕುಮಾರ್, ನಾಗೇಶ್, ಕುಳ್ಳೇಗೌಡ, ಶೇಖರ್, ಉಮೇಶ್, ಸ್ವಾಮಿ ಇತರರು ಇದ್ದರು.
ನುಗ್ಗೇಹಳ್ಳಿ: ರೈತರು ತೆಂಗು, ಅಡಿಕೆ ಬೆಳೆಯ ಜತೆ ಬೀನ್ಸ್, ಟೊಮ್ಯಾಟೊ ಇತರ ತರಕಾರಿಗಳನ್ನು ಬೆಳೆಯುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. ಜತೆಗೆ ಬೆಳೆದ ತರಕಾರಿಗಳ ಬಳಕೆಯಿಂದ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ತಿಳಿಸಿದರು.
ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಎಫ್‌ಎನ್‌ಎಸ್ ಯೋಜನೆ ಯಡಿ ಅಲಸಂದೆ, ರಾಗಿ, ಗೊಬ್ಬರ ಇತರೆ ಪರಿಕರಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಕೋಲಾರ ಜಿಲ್ಲೆಯಲ್ಲಿ ಕಲುಷಿತ ನೀರನ್ನು ಶುದ್ಧೀಕರಿಸಿ ತರಕಾರಿಗಳನ್ನು ಬೆಳೆಯುತ್ತಾರೆ. ನಮ್ಮ ಜಿಲ್ಲೆಯ ಫಲವತ್ತಾದ ಭೂಮಿಯಲ್ಲಿ ಬೀನ್ಸ್, ಮೆಣಸಿನಕಾಯಿ, ಕ್ಯಾರೆಟ್, ಬೀಟ್ರೂಟ್ ಇತರ ಮಿಶ್ರ ತರಕಾರಿಗಳನ್ನು ಬೆಳೆಯುವುದರಿಂದ ಲಾಭ ದೊರೆಯುತ್ತದೆ. ಈ ನಿಟ್ಟಿನಲ್ಲಿ ರೈತರು ಕಾರ್ಯಪ್ರವೃತ್ತರಾಗಬೇಕು. ಕೃಷಿ ಇಲಾಖೆಯಿಂದ ನರೇನಹಳ್ಳಿ, ದೇವಲಾಪುರ ಗ್ರಾಮದ 100 ರೈತರಿಗೆ 2,500 ರೂ. ಬೆಲೆಯ ಬಿತ್ತನೆ ಬೀಜ, ಗೊಬ್ಬರ ವಿತರಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನ ರೈತರಿಗೆ 13 ಸಾವಿರ ಟನ್ ರಸಗೊಬ್ಬರದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯ, ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು. ಆರೋಗ್ಯ ಸ್ವಾಸ್ಥ ಯೋಜನೆ ಅಡಿ 65 ಲಕ್ಷ ರೂ. ವೆಚ್ಚದ ಆರೋಗ್ಯ ಮಂದಿರ ದೇವಲಾಪುರಕ್ಕೆ ಮಂಜೂರಾಗಿದೆ. ಗ್ರಾಮಸ್ಥರು ಒಗ್ಗಟ್ಟಾಗಿ ನಿವೇಶನ ನೀಡಿದರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಜೀ.ವಿ. ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಆರ್. ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿ. ಆರ್. ನಾಗೇಶ್, ಕುಳ್ಳೇಗೌಡ, ಡಿ.ಎಚ್. ಸ್ವಾಮಿ, ಶೇಖರ್, ಡಿ.ಸಿ. ಉಮೇಶ್, ಯುವ ಮುಖಂಡ ಎಚ್.ಪಿ. ಸಂಪತ್‌ಕುಮಾರ್, ಮೂಡಲಗಿರಿಗೌಡ, ಯೋಗಾನಂದ, ರಂಗನಾಥ್, ಪುಟ್ಟೇಗೌಡ, ಶಿವಲಿಂಗೇಗೌಡ, ಪಟೇಲ್ ಡಿ.ಆರ್. ಬಸವರಾಜ್ ಇತರರು ಹಾಜರಿದ್ದರು.