ಚೆನ್ನಮ್ಮ ಅವರ ಸಮಾಧಿ ಬಳಿ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಭವಾನಿ, ಶೈಲಜಾ, ಅನಸೂಯಾ ಇತರರಿದ್ದರು. 
ಹಾಸನ

ಚೆನ್ನಮ್ಮ ಸಮಾಧಿಗೆ ಕುಟುಂಬಸ್ಥರ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಚೆನ್ನಮ್ಮ ಸಮಾಧಿಗೆ ಕುಟುಂಬಸ್ಥರ ಪೂಜೆ
  • ಇಂದು ಮೂರನೇ ದಿನದ ಕಾರ್ಯ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅವರ ಪತ್ನಿ ಚೆನ್ನಮ್ಮ ಅವರ ಸಮಾಧಿಗೆ ಮಂಗಳವಾರ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಬುಧವಾರ ಮೂರನೇ ದಿನದ ಕಾರ್ಯ ಹಮ್ಮಿಕೊಳ್ಳಲಾಗಿದೆ.
ದೇವೇಗೌಡರು ಪತ್ನಿಯ ಅಂತ್ಯಕ್ರಿಯೆ ಬಳಿಕ ಹುಟ್ಟೂರು ಹರದನಹಳ್ಳಿಯಲ್ಲೇ ಸೋಮವಾರ ರಾತ್ರಿ ಉಳಿದಿದ್ದರು. ಮಂಗಳವಾರ ಮಡದಿ ಸಮಾಧಿ ಬಳಿ ಮೌನವಾಗಿ ಕುಳಿತಿದ್ದ ದೇವೇಗೌಡ ಅವರನ್ನು ಮಕ್ಕಳು ಸಂತೈಸಿದರು.
ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಭವಾನಿ, ಅನಸೂಯಾ, ಶೈಲಜಾ ಸೇರಿದಂತೆ ಕುಟುಂಸ್ಥರು ಇದ್ದರು.
ಹನ್ನೊಂದು ದಿನದ ಕಾರ್ಯದವರೆಗೆ ಸ್ಥಳದಲ್ಲಿ ನಂದಾದೀಪ ಉರಿಯುತ್ತಿರಲು ಸೂಚಿಸಿ ವಿಷ್ಣು ಸಹಸ್ರನಾಮ, ರುದ್ರ ಚಮಕ ಮಂತ್ರ ಪಠಿಸುವಂತೆ ಪಂಡಿತರಿಗೆ ದೇವೇಗೌಡರು ಸೂಚಿದ್ದರಿಂದ ಪಂಡಿತರು ಸ್ಥಳದಲ್ಲಿ ವೇದಮಂತ್ರ ಪಠಿಸಿದರು.
ಸಮಸ್ಯೆ ಬಗೆಹರಿಸುವ ತಾಣವಾಗಿ ಅಭಿವೃದ್ಧಿ
ಮುಂದಿನ ಕಾರ್ಯದ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಈ ಸ್ಥಳವನ್ನು ಲಕ್ಷಾಂತರ ಜನರಿಗೆ ಅನುಕೂಲವಾಗುವಂತೆ, ಜನರ ಸಮಸ್ಯೆ ಬಗೆಹರಿಸುವಂತಹ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸುತ್ತೇವೆ. ಹಿಂದೂ ಸಂಪ್ರದಾಯ ಬದಲಾಗುತ್ತಿರೋ ಕಾಲಘಟ್ಟದಲ್ಲಿ ಯುವ ಜನತೆಗೆ ಇಲ್ಲಿಂದ ಒಂದು ಮಾದರಿ ಸಂದೇಶ ಕೊಡುತ್ತೇವೆ ಎಂದರು.
ನಮ್ಮ ತಾಯಿ ಜನಾನುರಾಗಿಯಾಗಿದ್ದರು. ಅವರ ಸಮಾಧಿ ಮುಂದೆ ಹೇಳುತ್ತಿದ್ದೇನೆ. ನಮ್ಮ ಕೊನೇ ಉಸಿರು ಇರೋವರೆಗೂ ಜನತೆಯ ಸೇವೆ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.
ಸಿಎಂ ಹೆಸರು ಪ್ರಸಾಪ್ತ
ಅಂತ್ಯಕ್ರಿಯೆ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸಲಿಲ್ಲ ಎಂದು ಕೆಲವರು ಕೇಳಿದರು. ಇದರಲ್ಲಿ ಯಾವುದೇ ಉದ್ದೇಶ ಅಡಗಿಲ್ಲ. ಆ ಮಟ್ಟಕ್ಕೆ ನಾನು ಹೋಗುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಎಲ್ಲರೂ ಸಹಕರಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಎಚ್‌ಡಿಕೆ ಹೇಳಿದರು.
ಮೂರನೇ ದಿನದ ಪೂಜಾ ಕಾರ್ಯಕ್ರಮ ಇದ್ದು, ಚನ್ನಮ್ಮನ ಮಕ್ಕಳು ಮಾತ್ರವಲ್ಲದೇ ಅವರು ಸಾಕಿ ಸಲಹಿದ ಎಲ್ಲರೂ ಭಾಗಿಯಾಗುವಂತೆ ಕೋರಿದರು. ದ್ದರು.