ಹಾಸನ ನಗರದ ಸಂಗಮೇಶ್ವರ ಬಡಾವಣೆಯ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ದಿ.ಪ್ರೊ.ನೀಲಕಂಠಪ್ಪ ಮತ್ತು ಎವಿಕೆ ಕಾಲೇಜು ನಿವೃತ್ತ ಪ್ರಾಂಶುಪಾಲೆ ದಿ.ಪ್ರೊ.ಶಾಂತಿ ಸ್ಮರಣಾರ್ಥವಾಗಿ ಅವರ ಪುತ್ರಿ ಪ್ರಿಯಾ ನೀಲಕಂಠಪ್ಪ ಒಟ್ಟು 4 ಲಕ್ಷ ರೂ.ವನ್ನು ದತ್ತಿಯಾಗಿ ಹಸ್ತಾಂತರಿಸಿದರು.
- ವಿದ್ಯಾರ್ಥಿ ವೇತನಕ್ಕೆ ನಾಲ್ಕು ಲಕ್ಷ ರೂ. ದತ್ತಿ ನಿಧಿ ಸ್ಥಾಪನೆ
- ನಿವೃತ್ತ ಪ್ರಾಂಶುಪಾಲೆ ದಿವಂಗತ ಪ್ರೊ.ಶಾಂತಿ ಸ್ಮರಣಾರ್ಥ
ಹಾಸನ: ನಗರದ ಸಂಗಮೇಶ್ವರ ಬಡಾವಣೆಯ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ದಿ.ಪ್ರೊ.ನೀಲಕಂಠಪ್ಪ ಮತ್ತು ಎವಿಕೆ ಕಾಲೇಜು ನಿವೃತ್ತ ಪ್ರಾಂಶುಪಾಲೆ ದಿವಂಗತ ಪ್ರೊ.ಶಾಂತಿ ಸ್ಮರಣಾರ್ಥವಾಗಿ ಅವರ ಪುತ್ರಿ ಪ್ರಿಯಾ ನೀಲಕಂಠಪ್ಪ ಒಟ್ಟು 4 ಲಕ್ಷ ರೂ.ಗಳನ್ನು ದತ್ತಿಯಾಗಿ ನೀಡಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿಗೆ 2 ಲಕ್ಷ, ಎವಿಕೆ ಡಿಗ್ರಿ ಕಾಲೇಜಿಗೆ 1 ಲಕ್ಷ, ಎವಿಕೆ ಪಿಯು ಕಾಲೇಜಿಗೆ 1 ಲಕ್ಷ ಸೇರಿ ಒಟ್ಟು 4 ಲಕ್ಷ ರೂ. ಮೊತ್ತವನ್ನು ಠೇವಣಿಯಾಗಿ ನೀಡಿದರು.
ಈ ದತ್ತಿ ನಿಧಿಯಿಂದ ಬರುವ ಬಡ್ಡಿ ಮೊತ್ತವನ್ನು ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ತಿಳಿಸಿದರು. ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಿಯಾ ನೀಲಕಂಠಪ್ಪ ಅವರನ್ನು ಗೌರವಿಸಿತು.ರು.