ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಇಕೋ ಕ್ಲಬ್ ವತಿಯಿಂದ ಪರಿಸರ ಜಾಗೃತಿ, ಹಸಿರು ಸಂರಕ್ಷಣೆ ಮತ್ತು ಭೂಮಿಯ ಭವಿಷ್ಯವನ್ನು ರಕ್ಷಿಸುವ ಸಂಕಲ್ಪದೊಂದಿಗೆ ವನ ಚೇತನ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚೌಡುವಳ್ಳಿ ಜಗದೀಶ್, ಖಜಾಂಚಿ ಎಚ್.ಡಿ.ಪಾರ್ಶ್ವನಾಥ್, ಡಾ. ಎಚ್.ಎಸ್.ನರಸಿಂಹನ್, ಜಯಪಾಲ್, ಡಾ.ಶಿವಶಂಕರ್, ಸಹಪ್ರಾಧ್ಯಾಪಕ ಡಾ.ಡಿ.ಜಿ. ಪ್ರದೀಪ್, ಡಿ.ವಿ.ಶ್ರುತಿ, ಕಟ್ಟಾಯ ಶಿವಕುಮಾರ್, ಚಂದನ್, ಎಚ್.ಕೆ.ರಾಹುಲ್ ಇತರರಿದ್ದರು. 
ಹಾಸನ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಪ್ರಮುಖ ಮುಖ್ಯಾಂಶಗಳು

  • ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
  • ಎಂಸಿಇ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಅಭಿಪ್ರಾಯ
  • ವನ ಚೇತನ ಕಾರ್ಯಕ್ರಮ
ಹಾಸನ: ಪರಿಸರ ಜಾಗೃತಿ, ಹಸಿರು ಸಂರಕ್ಷಣೆ ಮತ್ತು ಭೂಮಿಯ ಭವಿಷ್ಯವನ್ನು ರಕ್ಷಿಸುವ ಸಂಕಲ್ಪದೊಂದಿಗೆ ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಇಕೋ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವನ ಚೇತನ-2025 ಎರಡು ದಿನಗಳ ಕಾರ್ಯಕ್ರಮವನ್ನು ಎಂಸಿಇ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಎಂದರೆ ಕೇವಲ ಸರ್ಕಾರ ಅಥವಾ ಇಲಾಖೆಗಳ ಕೆಲಸವಲ್ಲ, ಪ್ರತಿ ನಾಗರಿಕನ ಕರ್ತವ್ಯ. ಸಾಲುಮರದ ತಿಮ್ಮಕ್ಕ ಅವರಂತೆ ಅಂಕುರದಿಂದ ಅರಣ್ಯವನ್ನೇ ರೂಪಿಸಿದವರು ನಿಸರ್ಗದ ದೇವತೆ. ಅವರಂತಹ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು ನಾವು ಗಿಡ, ಮರಗಳನ್ನು ರಕ್ಷಿಸುವ ಜಾಗೃತಿ ಹೊಂದಬೇಕು ಎಂದು ಚೌಡುವಳ್ಳಿ ಜಗದೀಶ್ ಹೇಳಿದರು.
ಶುದ್ಧ ವಾಯು, ಶುದ್ಧ ನೀರು, ಶಾಶ್ವತ ಪರಿಸರ ಇಕೋ ಕ್ಲಬ್ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಸ್ಪರ್ಧೆಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಪರಿಸರ ಶಿಕ್ಷಣದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಭಾಗ ಅರಣ್ಯ ಅಧಿಕಾರಿ ಲಷ್ಕರ್ ನಾಯಕ್ ಹಾಸನ ಜಿಲ್ಲೆಯ ವೈವಿಧ್ಯಮಯ ಪ್ರಕೃತಿ ವೈಭವದ ಬಗ್ಗೆ ಮಾತನಾಡಿದರು.
ಹಾಸನ ಜಿಲ್ಲೆ ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆಯ ಸಂಯೋಜನೆ. ಇಲ್ಲಿ ಸಮತಟ್ಟು ಪ್ರದೇಶ, ಬೆಟ್ಟಗುಡ್ಡಗಳು, ತಂಪಾದ ಹವಾಮಾನ, ಆನೆ, ಹುಲಿ, ಸಿಂಹ, ಕರಡಿ, ಚಿರತೆ ಸೇರಿದಂತೆ ಹಲವಾರು ವನ್ಯಜೀವಿಗಳ ಅಡಗುಸ್ಥಾನವಾಗಿದೆ. ಜಿಲ್ಲೆಯ ಅರಣ್ಯ ಪ್ರದೇಶ ರಾಜ್ಯದಲ್ಲೇ ಅತಿ ದೊಡ್ಡದಲ್ಲೊಂದು. ಇಲ್ಲಿ ಗಿಡ, ಮರ ಬೆಳೆಸುವುದರ ಜತೆಗೆ ವನ್ಯಜೀವಿ ಸಂರಕ್ಷಣೆಗೂ ಪ್ರಾಮುಖ್ಯ ನೀಡಲಾಗಿದೆ. ಪ್ರತಿ ವರ್ಷ ಇಕೋ ಕ್ಲಬ್ ನಡೆಸುವ ವನ ಚೇತನ ಕಾರ್ಯಕ್ರಮ ಪರಿಸರ ಜಾಗೃತಿ ಮೂಡಿಸಲು ಮಹತ್ವದ ಪಾತ್ರವಹಿಸಿದೆ ಎಂದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಖಜಾಂಚಿ ಎಚ್.ಡಿ.ಪಾರ್ಶ್ವನಾಥ್, ಪ್ರಭಾರ ಪ್ರಾಂಶುಪಾಲ ಡಾ.ಎಚ್.ಎಸ್.ನರಸಿಂಹನ್, ಪರ್ಯಟನಾ ಅರಣ್ಯ ಅಧಿಕಾರಿ ಜಯಪಾಲ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಹಾಯಕ ಅಧಿಕಾರಿ ಡಾ.ಶಿವಶಂಕರ್, ಸಹಪ್ರಾಧ್ಯಾಪಕ ಡಾ.ಡಿ.ಜಿ.ಪ್ರದೀಪ್, ಡಿ.ವಿ.ಶ್ರುತಿ, ಕಟ್ಟಾಯ ಶಿವಕುಮಾರ್, ಚಂದನ್, ಎಚ್.ಕೆ.ರಾಹುಲ್, ಇಕೋ ಕ್ಲಬ್ ಪದಾಧಿಕಾರಿಗಳು, ನೌಕರರು ಇತರರಿದ್ದರು.