ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಕಳ್ಳನ ಚಲನವಲನದ ದೃಶ್ಯ.
- ವಿದ್ಯುತ್ ವೈರ್ ಕಳವು
- ನಿರ್ಮಾಣ ಹಂತದ ಮನೆ
ಹಾಸನ: ನಗರದ ಸತ್ಯಮಂಗಲ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಗೆ ಅಳವಡಿಸಿದ್ದ ವಿದ್ಯುತ್ ವೈರ್‌ಗಳನ್ನು ಕಳವು ಮಾಡಲಾಗಿದೆ.
ನಿವೃತ್ತ ಸೈನಿಕ ಕುಶಾಲ್ ರಾಜು ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮಂಗಳವಾರ ಮಧ್ಯರಾತ್ರಿ ಮನೆಗೆ ಅಳವಡಿಸಿದ್ದ ಬಾಗಿಲಿನ ಸ್ಕ್ರೂ ಬಿಚ್ಚಿ ಒಳನುಗ್ಗಿರುವ ಕಳ್ಳ ಮನೆಗೆ ಅಳವಡಿಸಿದ್ದ ವಿದ್ಯುತ್ ವೈರ್‌ಗಳನ್ನು ಕಳವು ಮಾಡಿದ್ದಾನೆ. ಕ್ಯೂರಿಂಗ್‌ಗೆ ನೀರು ಹಾಕಲು ತುಂಬಿಸಿದ್ದ ಡ್ರಮ್ ಬಳಸಿ ವಿದ್ಯುತ್ ವೈರ್ ಕಳವು ಮಾಡಲಾಗಿದೆ.
ಸುಮಾರು 50 ಸಾವಿರ ರೂ. ವೈರ್ ಕಳವು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಕಳ್ಳನ ಚಲನವಲಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆ ಮಾಲೀಕ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.