ಅರಕಲಗೂಡಿನಲ್ಲಿ ಭಾನುವಾರ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದವರನ್ನು ಅಭಿನಂದಿಸಲಾಯಿತು. ಪಿ.ಶಿವಕುಮಾರ್, ದೇವಕಿ ಚಂದ್ರಶೇಖರ್, ಗಣೇಶ್, ಸತೀಶ್ ಇತರರಿದ್ದರು. 
ಹಾಸನ

ತಾಲೂಕು ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

ಅರಕಲಗೂಡು: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿ. ಶಿವಕುಮಾರ್ ಆಯ್ಕೆಯಾದರು.
ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ.ವಿಜಯಕುಮಾರ್ ಮತ್ತು ಪಿ.ಶಿವಕುಮಾರ್ ಅವರಿಗೆ ಸಮ ಪ್ರಮಾಣದಲ್ಲಿ ಮತಗಳು ಚಲಾವಣೆಯಾದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಪಿ.ಶಿವಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ದೇವಕಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಕೆ.ವಿ.ಸತೀಶ್, ಖಜಾಂಚಿಯಾಗಿ ರವಿ ಹಾಗೂ ನಿರ್ದೇಶಕರಾಗಿ ಸಂತೋಷಗೌಡ, ಡಿ.ಎನ್.ರಾಜೇಂದ್ರಕುಮಾರ್, ಎಂ.ಬಿ.ಸಾಹಸ್, ಬಿ.ಎ.ರಘು, ಕೆ.ಆರ್.ಶ್ರೀನಿವಾಸ್, ಬಿ.ಸಿ.ಜಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕುಶ್ವಂತ್, ಸಹಾಯಕ ಚುನಾವಣಾಧಿಕಾರಿಯಾಗಿ ಶರತ್ ಕಾರ್ಯನಿರ್ವಹಿಸಿದರು.