ಎಸ್ಪಿ ಶುಭನ್ವಿತ 
ಹಾಸನ

ನಶೆಮುಕ್ತ ಜಿಲ್ಲೆ ಮೊದಲ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ನಶೆಮುಕ್ತ ಜಿಲ್ಲೆ ಮೊದಲ ಆದ್ಯತೆ
  • ನೂತನ ಎಸ್ಪಿ ಶುಭಾನ್ವಿತಾ ಹೇಳಿಕೆ
ಹಾಸನ: ಜಿಲ್ಲೆಯನ್ನು ಡ್ರಗ್ಸ್ ನಶೆಯಿಂದ ಮುಕ್ತ ಮಾಡುವುದು, ಮಹಿಳೆಯರು, ಮಕ್ಕಳ ಸುರಕ್ಷತೆಗೆ ಒತ್ತು ಹಾಗೂ ರಸ್ತೆ ಅಪಘಾತದಿಂದ ಸಾವು-ನೋವು ತಡೆಯುವುದು ನನ್ನ ಮೊದಲ ಆದ್ಯತೆ ಎಂದು ನೂತನ ಎಸ್ಪಿ ಶುಭಾನ್ವಿತಾ ಹೇಳಿದರು.
ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯನ್ನು ನಶೆಮುಕ್ತ ಮಾಡುವುದು ಮೊದಲ ಆದ್ಯತೆ. ಈ ವಿಚಾರದಲ್ಲಿ ಎರಡು ಕಡೆ ಗಮನಹರಿಸಬೇಕಿದೆ. ಬಳಕೆ ಮಾಡುವವರಿಗಿಂತ ಪೂರೈಕೆ ಮಾಡುವವರು ಮುಖ್ಯ ಅಪರಾಧಿಗಳು. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಡಗ್ಸ್ ವ್ಯಸನಿಗಳಿಗೆಂದು ತೆರೆದಿರುವ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವವರಿಗೆ ಅರಿವು ಮೂಡಿಸಲಾಗುತ್ತಿದೆ. ು ಹಿ ೆ ು ು - ು ್ಕ ಸುರಕ್ಷಿತೆಗೆ ಒತ್ತು ನೀಡಲಾಗುವುದು. ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದ್ದು, ತಡೆಗಟ್ಟಲು ಎಲ್ಲ ಗ್ರಾಪಂ ಮಟ್ಟದಲ್ಲೂ ಜಾಗೃತಿ ಕಾರ್ಯಕ್ರಮ ಮಾಡುತ್ತೇವೆ. ಹಾಗೆಯೇ ಶಾಲೆಗಳಲ್ಲಿ ಸಿ ಬಾಕ್ಸ್ ಇಡಲಾಗುವುದು. ಅದರ ಕೀ ಪೊಲೀಸರ ಬಳಿ ಇರಲಿದೆ, ಹೆಣ್ಣು ಮಕ್ಕಳು ಬಾಕ್ಸ್ ಮೂಲಕ ಮೆಸೇಜ್ ಕೊಡಬಹುದು ಎಂದರು.
ಒಂಟಿ ಮಹಿಳೆಯರು, ಒಬ್ಬ ಪಾಲಕರಿಗೆ ಸ್ವಉದ್ಯೋಗ ಕಲ್ಪಿಸಿ ಸ್ವಾವಲಂಬನೆ ಮಾಡಲು ಒತ್ತು ನೀಡಲಾಗುವುದು. ಇತ್ತೀಚೆಗೆ ರಚನೆಯಾಗಿರುವ ಅಕ್ಕ ಪಡೆಗೆ ಕಿಕ್ ಬಾಕ್ಸಿಂಗ್ ಇತ್ಯಾದಿ ತರಬೇತಿ ನೀಡಿ ಮಹಿಳಾ ರಕ್ಷಣೆಗೆ ಸಶಕ್ತಗೊಳಿಸಲಾಗುವುದು. ಹಾಗೆಯೇ ಹೆಣ್ಣು ಮಕ್ಕಳಿಗೂ ತರಬೇತಿ ನೀಡಲಾಗುವುದು. ರಸ್ತೆ ಅಪರಾಧ ತಡೆಗೆ ಫೆ.1ರಿಂದ ವಿವಿಧ ಇಲಾಖೆ ಅಧಿಕಾರಿ ಒಳಗೊಂಡ ತಂಡ ರಚನೆ ಮಾಡಿ, ಬ್ಲಾಕ್ ಸ್ಪಾಟ್ ಗುರುತು ಮಾಡಿ, ಅಲ್ಲಿಗೆ ಭೇಟಿ ನೀಡಿ ಯಾಕೆ ಅಪಘಾತ ಘಟಿಸುತ್ತಿವೆ ಎಂಬ ಕಾರಣ ತಿಳಿದು, ಆಕ್ಸಿಡೆಂಟ್ ತಡೆಗೆ ಸಂಬಂಧಪಟ್ಟವರೊಂದಿಗೆ ಪತ್ರ ವ್ಯವಹಾರ ನಡೆಸುವ ಭರವಸೆ ನೀಡಿದರು.
ಟ್ರಾಫಿಕ್ ಸಮಸ್ಯೆ, ಆಟೋ ಪಾರ್ಕಿಂಗ್ ಕಿರಿಕಿರಿ ಬಗ್ಗೆಯೂ ಪರಿಹಾರ ಕಂಡು ಹಿಡಿಯಲು ಗಮನಹರಿಸಲಾಗುವುದು. ಏನೇ ಇದ್ದರೂ ನಮಗೆ ಮಾಹಿತಿ ಕೊಡಿ, ಸ್ಪಂದನೆಗೆ ನಾವು ಸಿದ್ಧರಿದ್ದೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬೇಡಿ. ನಾನು ಜಿಲ್ಲೆಗೆ ಬಂದು ನಾಲ್ಕು ವಾರ ಕಳೆದಿದ್ದು, ಪತ್ರಕರ್ತರು ಸೇರಿದಂತೆ ಎಲ್ಲರ ಕಡೆಯಿಂದ ನನಗೆ ಸಹಕಾರ ಸಿಕ್ಕಿದೆ. ಸಮಾಜದಲ್ಲಿ ಘಟಿಸುವ ಬೇಡವಾದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಾಧ್ಯಮಗಳ ಜವಾಬ್ದಾರಿ ದೊಡ್ಡದಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ.ಎಸ್.ಪ್ರಮೋದ್, ಎನ್.ನಂಜುಂಡೇಗೌಡ, ಮೋಹನ್ ಕುಮಾರ್, ಬಿ.ಆರ್. ಬೊಮ್ಮೇಗೌಡ, ಕೆ.ಎಂ.ಹರೀಶ್, ಖುಶ್ವಂತ್, ಖಜಾಂಚಿ ಪ್ರಕಾಶ್ ಬೆಳವಾಡಿ ಇತರರಿದ್ದರು.
ಬಾಂಗ್ಲಾ ನುಸುಳುಕೋರರ ಮಾಹಿತಿ ನೀಡಿ
ಬಾಂಗ್ಲಾ ನುಸುಳುಕೋರರ ಬಗ್ಗೆ ಮಾಹಿತಿ ಇದ್ದರೆ ನಮಗೆ ನೀಡಿ, ಈ ವಿಚಾರದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಸ್ಪಿ ಶುಭನ್ವಿತಾ ಹೇಳಿದರು.
ಮುಖ ಚಹರೆ ಅಥವಾ ಬೇರೆ ಕಾರಣದಿಂದ ಕ್ರಮ ಬೇಡ, ನಿಖರ ಮಾಹಿತಿ ಇದ್ದರೆ ಕೊಟ್ಟರೆ ನಾವು ಪರಿಶೀಲಿಸಿ, ಅಗತ್ಯಬಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಅಪರಾಧ ಹೆಚ್ಚಳಕ್ಕೆ ಪೊಲೀಸರು ಕೈಜೋಡಿಸುವುದು ಕಂಡು ಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.