ಭಾರತ ಸ್ಕೌಟ್ ಮತ್ತು ಗೈಡ್ಸ್ ಹಾಸನ ಜಿಲ್ಲಾ ಸಂಸ್ಥೆಯಲ್ಲಿ ಕಳೆದ 40 ವರ್ಷಗಳಿಂದ ಸಲ್ಲಿಸಿದ ಅತ್ಯುನ್ನತ ಸೇವೆಗಾಗಿ ಹಾಸನ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಅವರಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಜೀವಮಾನ ಸಾಧನೆಗಾಗಿ ನೀಡುವ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ರಜತ ನಕ್ಷತ್ರ ಪ್ರಶಸ್ತಿಯನ್ನು ಉತ್ತರಪ್ರದೇಶದ ರಾಜ್ಯಪಾಲ ಆನಂದಿ ಬೆನ್ ಅವರು ಲಕ್ನೋದ ರಾಜಭವನದಲ್ಲಿ ವಿತರಿಸಿದರು. 
ಹಾಸನ

ಡಾ.ವೈ.ಎಸ್.ವೀರಭದ್ರಪ್ಪಗೆ ರಜತ ನಕ್ಷತ್ರ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಡಾ.ವೈ.ಎಸ್.ವೀರಭದ್ರಪ್ಪಗೆ ರಜತ ನಕ್ಷತ್ರ ಪ್ರಶಸ್ತಿ
  • ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಜೀವಮಾನ ಸಾಧನೆಗಾಗಿ ನೀಡುವ ಉನ್ನತ ಪ್ರಶಸ್ತಿ
ಹಾಸನ: ಭಾರತ ಸ್ಕೌಟ್ ಮತ್ತು ಗೈಡ್ಸ್ ಹಾಸನ ಜಿಲ್ಲಾ ಸಂಸ್ಥೆಯಲ್ಲಿ ಕಳೆದ 40 ವರ್ಷಗಳಿಂದ ಸಲ್ಲಿಸಿದ ಅತ್ಯುನ್ನತ ಸೇವೆಗಾಗಿ ಹಾಸನ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ಅವರಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಜೀವಮಾನ ಸಾಧನೆಗಾಗಿ ನೀಡುವ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ರಜತ ನಕ್ಷತ್ರ ಪ್ರಶಸ್ತಿಯನ್ನು ಉತ್ತರಪ್ರದೇಶದ ರಾಜ್ಯಪಾಲ ಆನಂದಿ ಬೆನ್ ಅವರು ಲಕ್ನೋದ ರಾಜಭವನದಲ್ಲಿ ವಿತರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಭಾರತ ಸ್ಕೌಟ್ ಗೈಡ್ ರಾಷ್ಟ್ರೀಯ ಸಂಸ್ಥೆಯ ಮುಖ್ಯ ಆಯುಕ್ತ ಕೆ.ಕೆ. ಖಂಡೇಲ್ ವಾಲಾ ಹಾಗೂ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಇತರರು ಇದ್ದರು.
ಡಾ.ವೈ.ಎಸ್.ವೀರಭದ್ರಪ್ಪ ಅವರ ಜೀವಮಾನದ ಸಾಧನೆಗೆ ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಹಾಸನ ಜಿಲ್ಲಾ ಸಂಸ್ಥೆಯ ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಸ್ಕೌಟ್ ಗೈಡ್ ಶಿಕ್ಷಕರು-ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.