ಹಾಸನ ನಗರದ ಟಾರ್ಗೆಟ್ ಪಿ.ಯು.ಕಾಲೇಜಿನಲ್ಲಿ ರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ಪೋಸ್ಟರ್ ತಯಾರಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ನಾಗೇಶ್ ಆರಾಧ್ಯ, ಡಾ.ಕಾರ್ತಿಕ್, ಎಚ್.ಕೆ.ರಾಹುಲ್ ಇತರರು ಇದ್ದರು.
- ಮೂರ್ಛೆ ಬಂದ ವ್ಯಕ್ತಿ ಕೈಗೆ ಕಬ್ಬಿಣ ಕೊಡದಿರಿ
- ರಾಷ್ಟ್ರೀಯ ಅಪಸ್ಮಾರ ದಿನಾಚರಣೆಯಲ್ಲಿ ಡಾ. ನಾಗೇಶ್ ಸಲಹೆ
ಹಾಸನ: ಮೂರ್ಛೆರೋಗ ಬಂದ ವ್ಯಕ್ತಿಯ ಕೈಗೆ ಕಬ್ಬಿಣದ ಕೀಲಿಗಳನ್ನು ಕೊಡುವುದು ಮತ್ತು ಪಿಟ್ಸ್ಸ್ ಬಂದ ಸಮಯದಲ್ಲಿ ನೀರು ಕುಡಿಸುವುದು ತಪ್ಪು. ಇದರಿಂದ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಜಿಲಾ ್ಲಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಟಾರ್ಗೆಟ್ ಪಿಯು ಕಾಲೇಜು ಆಶ್ರಯದಲ್ಲಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ಆಯೋಜಿಸಿದ್ದ ಪೋಸ್ಟರ್ ತಯಾರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮೂರ್ಛೆರೋಗಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸುವುದು ಮುಖ್ಯ, ಅದಕ್ಕೆ ಮದ್ದು ಇದೆ ಎಂದು ತಿಳಿಸಿದರು.
ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕರಾದ ಲತಾಮಣಿ ಮಾತನಾಡಿ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್ ಸ್ಥಾಪಿಸಿದ್ದು, ಇಲ್ಲಿ ವಿಶೇಷವಾಗಿ ಪಾರ್ಶ್ವವಾಯು, ಮೂರ್ಛೆರೋಗ, ತಲೆನೋವು ಮತ್ತು ಮರೆವಿನ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ಜೆ. ಕಾರ್ತಿಕ್ ಮಾತನಾಡಿದರು. ಟಾರ್ಗೆಟ್ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ರಾಹುಲ್ ಇತರರು ಉಪಸ್ಥಿತರಿದ್ದರು.