ಮಾಲ್ನಾಡ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿ ಹಾಗೂ ಹಿಪ್ಪೋ ಕ್ಯಾಂಪಸ್ ಲರ್ನಿಂಗ್ ಸೆಂಟರ್ ಇವರ ಅಧೀನದಲ್ಲಿರುವ ಮಾಲ್ನಾಡ್ ಹಿಪ್ಪೋಕ್ಯಾಂಪಸ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಜಾಯ್ ಆಫ್ ಗಿವಿಂಗ್ ಅಂಗವಾಗಿ ಹಾಸನ ಸಮೀಪದ ಆಗಿಲೆ ಗ್ರಾಮದಲ್ಲಿರುವ ತೇಜೋದಯ ನಿರಾಶ್ರಿತರ ಆಶ್ರಮಕ್ಕೆ ಅಗತ್ಯ ವಸ್ತುಗಳು ಮತ್ತು ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.
- ತೇಜೋದಯ ನಿರಾಶ್ರಿತರ ಆಶ್ರಮಕ್ಕೆ ಅಗತ್ಯ ವಸ್ತುಗಳ ಕೊಡುಗೆ
- ಆಶ್ರಯವಿಲ್ಲದವರು ಇಲ್ಲಿ ಆಶ್ರಯ ಪಡೆದು ಜೀವನ ಸಾಗಿಸುತ್ತಿದ್ದಾರೆ
ಹಾಸನ: ನಗರದ ಮಾಲ್ನಾಡ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿ ಹಾಗೂ ಹಿಪ್ಪೋ ಕ್ಯಾಂಪಸ್ ಲರ್ನಿಂಗ್ ಸೆಂಟರ್ ಇವರ ಅಧೀನದಲ್ಲಿರುವ ಮಾಲ್ನಾಡ್ ಹಿಪ್ಪೋಕ್ಯಾಂಪಸ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಜಾಯ್ ಆಫ್ ಗಿವಿಂಗ್ ಅಂಗವಾಗಿ ಹಾಸನ ಸಮೀಪದ ಆಗಿಲೆ ಗ್ರಾಮದಲ್ಲಿರುವ ತೇಜೋದಯ ನಿರಾಶ್ರಿತರ ಆಶ್ರಮಕ್ಕೆ ಅಗತ್ಯ ವಸ್ತುಗಳು ಮತ್ತು ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.
ಈ ತೇಜೋದಯ ನಿರಾಶ್ರಿತರ ಆಶ್ರಮವನ್ನು ಆಟೋ ಚಾಲಕ ತೇಜು ಅವರು ಮಾನವೀಯ ಕಾಳಜಿಯೊಂದಿಗೆ ನಡೆಸಿಕೊಂಡು ಬರುತ್ತಿದ್ದು, ರಸ್ತೆ ಬದಿಯಲ್ಲಿ ನಿರಾಶ್ರಿತರಾಗಿ ಕಂಡುಬರುವವರು ಹಾಗೂ ಆಶ್ರಯವಿಲ್ಲದವರು ಇಲ್ಲಿ ಆಶ್ರಯ ಪಡೆದು ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಜತೆಯಾಗಿ ಶಾಲೆಯ ವಿದ್ಯಾರ್ಥಿಗಳು ಹಾಸನದಲ್ಲಿರುವ ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧೀನದಲ್ಲಿರುವ ವೃದ್ಧಾಶ್ರಮಕ್ಕೂ ಭೇಟಿ ನೀಡಿದರು. ವಿದ್ಯಾರ್ಥಿಗಳು ಅಲ್ಲಿ ವೃದ್ಧರೊಂದಿಗೆ ಸಮಯ ಕಳೆಯುತ್ತಾ, ಅವರೊಂದಿಗೆ ಮಾತನಾಡಿ, ತಮ್ಮ ಪ್ರೀತಿ ಮತ್ತು ಆತ್ಮೀಯತೆಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ಸಮಾಜಸೇವೆಯ ಮನೋಭಾವ, ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಸಹಕಾರದಿಂದ ಈ ಸೇವಾ ಕಾರ್ಯಗಳು ಯಶಸ್ವಿಯಾಗಿ ನಡೆದವು.