ಹಾಸನ ನಗರದ ಬಿ. ಕಾಟೀಹಳ್ಳಿ ಬಳಿಯ ಯುನೈಟೆಡ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಎಲ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ದೊರೆಯಿತು. ಕುಡ್ಲಿ ಅರವಿಂದ್ ಶೆಣೈ, ಬಿ.ವಿ. ಹೆಗಡೆ, ಎಚ್.ಆರ್. ಚಂದ್ರೇಗೌಡ, ಎ.ಸಿ. ಗಿರೀಶ್, ಎಚ್.ರಮೇಶ್, ಸಿ.ಶಿವಸ್ವಾಮಿ, ಚಿಕ್ಕೇಗೌಡ, ಎಚ್.ಪಿ. ಅಶೋಕ್ ಕುಮಾರ್ ಇತರರಿದ್ದರು.
- ಜಿಲ್ಲಾ ಮಟ್ಟದ ಎಲ್‌ಪಿಎಲ್‌ಗೆ ಚಾಲನೆ
- ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಿಂದ 14 ತಂಡಗಳು ಭಾಗಿ
ಹಾಸನ: ನಗರದ ಬಿ.ಕಾಟೀಹಳ್ಳಿ ಬಳಿಯ ಯುನೈಟೆಡ್ ಅಕಾಡೆಮಿ ಮೈದಾನದಲ್ಲಿ ಲಯನ್ಸ್ ಸೇವಾ ಸಂಸ್ಥೆ, ಲಯನ್ಸ್ ಜಿಲ್ಲೆ 317-ಡಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಲ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರ ಚಾಲನೆ ದೊರೆಯಿತು.
ಪ್ರಾಂತಪಾಲ ಕುಡ್ಲಿ ಅರವಿಂದ್ ಶೆಣೈ ಮಾತನಾಡಿ, ಟೂರ್ನಿ ಕೇವಲ ಸ್ಪರ್ಧೆಯಲ್ಲ. ಲಯನ್ಸ್ ಪರಿವಾರದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವೇದಿಕೆ. ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ಕ್ರೀಡಾತ್ಮಕಭಾವವನ್ನು ಉಳಿಸಬೇಕು ಎಂದು ಹೇಳಿದರು.
ಈ ವರ್ಷ ಮಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಒಟ್ಟು 14 ತಂಡಗಳು ಪ್ರಾಂತೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಭಾಗವಹಿಸಿವೆ. ತಂಡಗಳು ಲೀಗ್ ಮತ್ತು ನಾಕೌಟ್ ಪಂದ್ಯಗಳನ್ನು ಆಡಲಿವೆ. ಟೂರ್ನಿಯನ್ನು ಜಿಲ್ಲಾ ಮುಖ್ಯ ಸಂಯೋಜಕ ಡಾ.ಎ.ಸಿ.ಗಿರೀಶ್ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಮೈದಾನದ ಸೌಲಭ್ಯ, ಅಂಪೈರ್ ವ್ಯವಸ್ಥೆ, ಸುರಕ್ಷತಾ ಕ್ರಮ ಹಾಗೂ ತಂಡಗಳ ವಸತಿ, ಆಹಾರ ವ್ಯವಸ್ಥೆಯನ್ನೂ ಸಮರ್ಪಕವಾಗಿ ಮಾಡಲಾಗಿದೆ ಎಂದು ಹೇಳಿದರು.
ಮಾಜಿ ಪ್ರಾಂತಪಾಲ ಬಿ.ವಿ.ಹೆಗಡೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್.ಚಂದ್ರೇಗೌಡ, ಎಲ್‌ಪಿಎಲ್ ಕ್ರಿಕೆಟ್ ಜಿಲ್ಲಾ ಕೋಡಿನೇಟರ್ ಎ.ಸಿ.ಗಿರೀಶ್, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ರಮೇಶ್, ಸಿ.ಶಿವಸ್ವಾಮಿ, ಚಿಕ್ಕೇಗೌಡ, ಎಚ್.ಪಿ.ಅಶೋಕ್ ಕುಮಾರ್, ಗೋವಾರ್ಧನ್ ಕೆ.ಶೆಟ್ಟಿ, ವಲಯ ಅಧ್ಯಕ್ಷ ಎಚ್.ಕೆ.ನಾಗೇಶ್, ಗೋವಾರ್ಧನ್ ಕೆ.ಶೆಟ್ಟಿ, ಕಾರ್ಯದರ್ಶಿ ಡಿ.ಎನ್. ತಿಲಕ್ ಗೌಡ, ರಘು ಪಾಳ್ಯ, ಮಮತೇಶ್, ವೆಂಕಟೇಗೌಡ, ಚಿಕ್ಕೇಗೌಡ, ಬಿ.ಎಸ್. ಸೋಮಶೇಖರ್, ತಿಮ್ಮರಾಯಶೆಟ್ಟಿ, ಎಸ್.ಎಸ್. ಲೋಹಿತ್ ಕುಮಾರ್, ತಿಮ್ಮರಾಯಶೆಟ್ಟಿ ಇತರರಿದ್ದರು.