ಜವನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಅವರ 60ನೇ ಜನ್ಮದಿನೋತ್ಸವ ಮತ್ತು ಮಠದ ಹಿರಿಯ ಶ್ರೀಗಳ ತ್ರೀಮೂರ್ತಿ ಗದ್ದುಗೆ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ನೆರವೇರಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ, ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ವಿಜಯ್ ಕುಮಾರ್ ಸ್ವಾಮೀಜಿ, ನಂದಿಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಲ್ಲೇಶ್ವರ ಸ್ವಾಮೀಜಿ, ತೊರೆನೂರು, ರವಿ ನಾಕಲಗೂಡು ಇತರರಿದ್ದರು.
- ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ
- ಶ್ರೀ ಶಂಭುನಾಥ ಸ್ವಾಮೀಜಿ ಹೇಳಿಕೆ
- ಗದ್ದುಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಹಾಸನ: ಮಠಗಳ ಅಭಿವೃದ್ಧಿಗೆ ಭಕ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಜವನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಅವರ 60ನೇ ಜನ್ಮದಿನೋತ್ಸವ ಮತ್ತು ಮಠದ ಹಿರಿಯ ಶ್ರೀಗಳ ತ್ರೀಮೂರ್ತಿ ಗದ್ದುಗೆ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ಇತ್ತೀಚೆಗೆ ನೆರವೇರಿಸಿ ಮಾತನಾಡಿದರು.
ಜವನಹಳ್ಳಿ ಮಠದ ಸ್ವಾಮೀಜಿ ನಮ್ಮ ಆತ್ಮೀಯರು. ಮಠದಲ್ಲಿ ನೂತನ ದೇವಾಲಯ ಹಾಗೂ ಗದ್ದುಗೆ ನಿರ್ಮಾಣ ಮಾಡುತ್ತಿರುವುದು ಅತ್ಯುತ್ತಮ ಕೆಲಸ. ಇಂತಹ ಮಠಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಭಕ್ತನೂ ಸಹಕಾರ ನೀಡುವುದು ತನ್ನ ಜವಾಬ್ದಾರಿ ಎಂದು ಹೇಳಿದರು.
ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಸುಮಾರು 700 ವರ್ಷದ ಪ್ರಾಚೀನ ಮಠ ಮತ್ತು ದೇವಾಲಯ ಜೀರ್ಣಾವಸ್ಥೆಯಾಗಿದ್ದ ಕಾರಣ ಕೆಡವಿ ನೂತನ ಮಠ ಮತ್ತು ದೇವಾಲಯವನ್ನು ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಿರಿಯ ಸ್ವಾಮೀಜಿಗಳ ಗದ್ದುಗೆ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿದೆ. ಈ ಹಿಂದೆ ದಿವಂಗತ ಎಚ್.ಎಸ್. ಪ್ರಕಾಶ್ ಅವರ ತಂದೆ ಸಣ್ಣಯ್ಯ ಗದ್ದುಗೆ ನಿರ್ಮಿಸಿದ್ದರು. ಈಗ ಮರು ನಿರ್ಮಾಣಕ್ಕೆ ಸುಮಾರು 40 ಲಕ್ಷ ರೂ.ವೆಚ್ಚವಾಗಲಿದ್ದು, ಇದಕ್ಕೆ ಸಹಾಯ ನೀಡಲು ಮನವಿ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭಿನವ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ತಣ್ಣೀರು ಹಳ್ಳ ಮಠದ ವಿಜಯ್ ಕುಮಾರ್ ಸ್ವಾಮೀಜಿ, ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಲ್ಲೇಶ್ವರ ಸ್ವಾಮೀಜಿ, ತೊರೆನೂರು, ರವಿ ನಾಕಲಗೂಡು, ಬಿ.ವಿ.ಉಮೇಶ್, ಪರಮಶಿವಯ್ಯ, ಕಟ್ಟಾಯ ಶಿವಕುಮಾರ್, ಶರತ್ ಭೂಷಣ್, ಮಂಜುನಾಥ್, ಶೋಭನ್ ಬಾಬು, ಮಯೂರಿ ಲೋಕೇಶ್, ಶೇಖರ್, ರಾಜಶೇಖರ್ ಮೂರ್ತಿ, ಇಂದ್ರಮ್ಮ, ಅವಿನಾಶ್, ದರ್ಶನ್, ಮದನ್, ಮಹಂತೇಶ್, ಅನ್ನಪೂರ್ಣಮ್ಮ, ಮಮತಾ ಪಾಟೀಲ್, ಧನಲಕ್ಷ್ಮೀ, ಲೋಕೇಶ್, ವೀಣಾದೇವರಾಜು, ಕಲ್ಲೇಶ್, ಶಾಂತಕುಮಾರ್, ವಸಂತ ಕಮಲಮ್ಮ, ಸೋಮಶೇಖರ್ ಇತರರು ಇದ್ದರು.