ಗೋವಿನಕೆರೆ ಗ್ರಾಮದಲ್ಲಿ ಎಂ. ಶಿವರ ಸರ್ಕಲ್ ಕದಂಬ ಪ್ರೀಮಿಯರ್ ಲೀಗ್ ಮೊದಲನೇ ವರ್ಷದ ಸಿಎನ್‌ಬಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಎಂ.ಆರ್. ಅನಿಲ್ ಕುಮಾರ್, ಶಿವಣ್ಣ, ಮರಿದೇವೇಗೌಡ, ರವಿಶಂಕರ್, ಪುನೀತ್, ರಾಜೀವ್, ರಾಕೇಶ್, ಶರತ್ ಇತರರು ಇದ್ದರು.
ಬಾಗೂರು: ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶುಕ್ರವಾರ ತಿಳಿಸಿದರು.
ಹೋಬಳಿಯ ಗೋವಿನಕೆರೆ ಗ್ರಾಮದಲ್ಲಿ ಎಂ. ಶಿವರ ಸರ್ಕಲ್ ಕದಂಬ ಪ್ರೀಮಿಯರ್ ಲೀಗ್ 1.0 ಮೊದಲ ಸಿಎನ್‌ಬಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ದಿನನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದರ ಜತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕ್ರಿಕೆಟಿನಿಂದ ಶಿಸ್ತು, ಧೈರ್ಯ, ಸಮಯ ನಿರ್ವಹಣೆಯ ಬಗ್ಗೆ ಯುವಕರಲ್ಲಿ ತಿಳವಳಿಕೆ ಹೆಚ್ಚಾಗುತ್ತದೆ ಎಂದರು.
ಭಾರತ 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ಬಾರಿಗೆ ವಿಶ್ವ ಕಪ್ ಗೆದ್ದಿತು. ಸುನಿಲ್ ಗವಾಸ್ಕರ್, ವಿಶ್ವನಾಥ್ ಕಾಲದಿಂದ ಕ್ರಿಕೆಟ್ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಿತು. ಈಗ ಬಿಸಿಸಿಐ ವಿಶ್ವದ ಶ್ರೀಮಂತ ಸಂಸ್ಥೆಯಾಗಿದೆ. 2027ರಲ್ಲಿ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದರು.
ಬಾಗೂರು ಹೋಬಳಿಯ ಕೆರೆಗಳಿಗೆ ಕಳೆದ ವರ್ಷ ಹೇಮಾವತಿ ನದಿ ನೀರು ತುಂಬಿಸಿದ್ದರಿಂದ ಅಂತರ್ಜಲ ವೃದ್ಧಿಯಾಗಿ ರೈತರು ತಮ್ಮ ಬೆಳೆ ಉಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸೂಚನೆ ಇದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಂ.ಆರ್. ಅನಿಲ್ ಕುಮಾರ್ ಮಾತನಾಡಿ, ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಹೇಮಾವತಿ ನದಿ ನೀರು ಹರಿಸಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. 13 ವರ್ಷಗಳಿಂದ ಬಾಗೂರು ಹೋಬಳಿಯನ್ನು ಮಾದರಿ ಮಾಡಲು ಶಾಸಕರು ಹೆಚ್ಚು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್. ಶಿವಣ್ಣ, ವಿ.ಎನ್. ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಮರಿದೇವೇಗೌಡ, ಮಾಜಿ ಸದಸ್ಯ ಬಸವರಾಜ್, ಮುಖಂಡರಾದ ಕುಂಬಾರಳ್ಳಿ ರಮೇಶ್, ನೆಟ್ಟೆಕೆರೆ ನಾಗರಾಜ್, ಬಿ.ಕೆ. ಮನು, ಎಸ್.ಡಿ. ಪುರುಷೋತ್ತಮ್, ಗೋವಿನಕೆರೆ ರಾಮಚಂದ್ರ, ರಮೇಶ್, ಭೂದೇಶ್, ಲಾಯರ್ ಧರಣೇಶ್, ಕದಂಬ ಪ್ರೀಮಿಯರ್ ಲೀಗಿನ ಸದಸ್ಯರಾದ ಕಾಮನಹಳ್ಳಿ ರವಿಶಂಕರ್ (ರಾಕಿ) ಮರಗೂರು ಪುನೀತ್, ಶ್ರೀನಿವಾಸ್, ಕಲ್ಲೇಸೋಮನಹಳ್ಳಿ ರಾಜೀವ್, ಮಾದಗುಡ್ಡನಹಳ್ಳಿ ರಾಕೇಶ್, ಶರತ್ ಇತರರು ಹಾಜರಿದ್ದರು.