ಮಾಜಿ ಪ್ರಧಾನಿ ಹಚ್ ,ಡಿ, ದೇವೇಗೌಡರ 94ನೇ ಹುಟ್ಟುಹಬ್ಬದ ಆಚರಣೆ ಈ ಸಂದರ್ಭದಲ್ಲಿ ಮೋಹನ್ ಕುಮಾರ್, ಆಶಾಮಣಿ, ಬಸವೇಗೌಡ, ಸತ್ಯಣ್ಣ, ಪ್ರಜ್ವಲ್, ಗಿಡ್ಡೆ ಗೌಡ ,ರಮೇಶ್, ಬೋರೇಗೌಡ, ಇನ್ನಿತರರು ಹಾಜರಿದ್ದರು 
ಹಾಸನ

ಎಚ್ ಡಿ ದೇವೇಗೌಡ ರವರ 94ನೇ ಹುಟ್ಟುಹಬ್ಬ

ಎ. ಆರ್. ರಘುರಾಮ
ಅರಸೀಕೆರೆ ಗ್ರಾಮಾಂತರ :-ತಾಲ್ಲೂಕಿನ ಗಂಡಸಿ ಹೋಬಳಿ ದೊಡ್ಡ ಯರಗನಾಳು ಗ್ರಾಮದಲ್ಲಿ ಭಾರತದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರವರ 94ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವದರ ಮೂಲಕ ಸೋಮವಾರ ಆಚರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯ್ ಕುಮಾರ್ ಭಾರತದ ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ರೈತರ ಪರ ಹೋರಾಟದ ಮೂಲಕ ಜನಮನ ಗೆದ್ದಿರುವ ಎಚ್ ಡಿ ದೇವೇಗೌಡ ರವರ 94ನೇ ವರ್ಷದ ಹುಟ್ಟುಹಬ್ಬದ ಈ ಶುಭ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ಸರಳತೆ, ಸತ್ಯನಿಷ್ಠೆ ಹಾಗೂ ಜನಪರ ಆಡಳಿತದ ಮೂಲಕ ದೇಶದ ಜನತೆಗೆ ಮಾದರಿಯಾದ ನಾಯಕರು ಎಚ್ ಡಿ ದೇವೇಗೌಡರು. ರೈತರು, ಬಡವರು ಮತ್ತು ಸಾಮಾನ್ಯ ಜನರ ಧ್ವನಿಯಾಗಿ ಜೀವನಪೂರ್ತಿ ಸೇವೆ ಸಲ್ಲಿಸಿರುವ ಅವರ ರಾಜಕೀಯ ಪಯಣ ಎಲ್ಲರಿಗೂ ಪ್ರೇರಣೆಯಾಗಿದೆ ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಮೋಹನ್ ಕುಮಾರ್ , ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಆಶಾಮಾಣಿ ಸತ್ಯಣ್ಣ , ಪ್ರಜ್ವಲ್, ಗಿಡ್ಡೆ ಗೌಡರ ಉಮೇಶ್, ಬಸವೇಗೌಡ , ಬೋರೇಗೌಡ ಸೇರಿದಂತೆ ದೊಡ್ಡ ಯರಗನಾಳು ಗ್ರಾಮಸ್ಥರು ಉಪಸ್ಥಿತರಿದ್ದರು.